About the Author

ಶ್ರೀಕಾಂತ ತಾಮ್ರಪರ್ಣಿ ಮೂಲತಃ ಬಳ್ಳಾರಿ ಜಿಲ್ಲೆಯ ಹೊಸಪೇಟೆಯವರು. ತಂದೆ- ಟಿ.ಮಾರುತಿ, ತಾಯಿ- ಟಿ.ಎಂ. ವೇದಾವತಿ. ಜಗಳೂರಿನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ನಂತರ ಚಿತ್ರದುರ್ಗದಲ್ಲಿ ಪದವಿ ಪೂರ್ಣಗೊಳಿಸಿದರು. ಮತ್ತೆ, ಹೊಸಪೇಟೆಯಲ್ಲಿ 8 ವರ್ಷ ಕಾಲ ಕಂಪ್ಯೂಟರ್ ತರಬೇತಿ ಕೇಂದ್ರ ಸ್ಥಾಪಿಸಿ ನಿರ್ವಹಿಸಿದರು. ಸದ್ಯ, ಬೆಂಗಳೂರಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 

ಸಾಹಿತ್ಯದ ವಿವಿಧ ಪ್ರಕಾರ ಕೃತಿಗಳ ಓದು, ಕಥೆ, ಕವನ, ಲಲಿತ ಪ್ರಬಂಧ ನಾಟಕ ಬರೆಹ ಹವ್ಯಾಸದ ಜೊತೆಗೆ, ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ‘ಬಹುಮುಖ’ ‘ಪ್ರಖರ’ ಇವರದೇ ರಚನೆ-ನಿರ್ದೇಶನಲ್ಲಿ ಪ್ರಯೋಗಾತ್ಮಕವಾಗಿ ಮೂಡಿಬಂದಿದೆ. ಕಿರುಚಿತ್ರಗಳಿಗೆ ಸಂಭಾಷಣೆ, ಗೀತರಚನೆ, ನಿರ್ದೇಶನ ಮಾಡಿದ್ದಾರೆ. ತಾಲ್ಲೂಕು, ಜಿಲ್ಲೆ, ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಕವನಗಳನ್ನು ವಾಚಿಸಿದ್ದಾರೆ. ಚಿತ್ರದುರ್ಗ ಆಕಾಶವಾಣಿಯಿಂದ ಇವರ ಕವನಗಳು ಪ್ರಸಾರವಾಗಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಪುಸ್ತಕ ಪ್ರಾಧಿಕಾರ ಸೇರಿದಂತೆ ಹಲವು ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. 2013ರಲ್ಲಿ ಇವರು ತಮ್ಮ ಮೊದಲನೇ ಕವನ ಸಂಕಲನ ‘ಲೇಖನಿಯೇ ಹಾಗೆ’ ಹಾಗೂ 2017ರಲ್ಲಿ ‘ಮಂದಾರ’ ಕಥಾ ಸಂಕಲನ ಪ್ರಕಟಗೊಂಡಿವೆ, ಕಮಲಾಪುರ ಹೋಬಳಿ ಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ‘ಕಮಲಸಿರಿ ಸ್ಮರಣ’ ಸಂಚಿಕೆ ಸಂಪಾದಿಸಿದ್ದಾರೆ. ಕಸಾಪ, ನಿರಂತರ ವೇದಿಕೆ, ಕಾವ್ಯಮನೆ. ಸಂಘರ್ಷ ಪ್ರಕಾಶನ ಮುಂತಾದ ಹಲವು ಸಾಹಿತ್ಯ ಸಂಘಟನೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಎಂ. ಶ್ರೀಕಾಂತ ತಾಮ್ರಪರ್ಣಿ

(16 Jul 1987)