About the Author

ಕಿರಿ ವಯಸ್ಸಿನ ಲೇಖಕಿ ಮಾನ್ಯ ವರ್ಷ ಅವರು ಬೆಂಗಳೂರಿನ ಬಿಟಿಎಂ ಲೇಔಟ್ ನಲ್ಲಿರುವ ವಿಬ್ಗಿಯರ್ ಶಾಲೆಯಲ್ಲಿ 5ನೇ ತರಗತಿ ವಿದ್ಯಾರ್ಥಿನಿ. ತಂದೆ ಹರ್ಷ, ತಾಯಿ ಚಿತ್ರ. ಅಜ್ಜಿಯಿಂದ ಕೇಳಿದ ಕಥೆಗಳಿಂದ ತಾನು ಬರೆಯಲು ಸ್ಫೂರ್ತಿ ಎಂಬುದು ಅವರ ಅಭಿಮಾನ. ಇಂಡಿಯಾ ಬುಕ್ ಆಫ್ ರೆಕಾರ್ಡ್ ಮತ್ತು ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ ವತಿಯಿಂದ " ಕನ್ನಡದ ಕಿರಿಯ ಲೇಖಕಿ " ಎಂದು ಹಾಗೂ ವಜ್ರ ಬುಕ್ ಆಫ್ ರೆಕಾರ್ಡ್ ವತಿಯಿಂದ " ಭಾರತದ ಕಿರಿಯ ಕವಿಯಿತ್ರಿ" ಎಂಬ ಬಿರುದು ಪಡೆದ ಕೀರ್ತಿ ಅವರದ್ದು.  ಭಾರತ ಕೇಂದ್ರ ಸರಕಾರ ಹಮ್ಮಿಕೊಂಡಿದ್ದ ವಾಟರ್ ಹೀರೋಸ್ ಸ್ಪರ್ಧೆ ಯಲ್ಲಿ ಕೂಡ ಮಾನ್ಯಳ ನೀರಿನ ಹೋರಾಟ ಮತ್ತು ಕಳಕಳಿ ಗೆ ಪ್ರಶಸ್ತಿ ದಕ್ಕಿದೆ.

ಕೃತಿಗಳು: ಒಂದಾನೊಂದು ಕಾಲದಲ್ಲಿ( 2020 ಲಾಕ್ಡೌನ್ ಡೈರೀಸ್-ಕಾದಂಬರಿ), ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿ ಬರೆದ ಮೊದಲ ಕೃತಿ-ನೀರಿನ ಪುಟಾಣಿ ಸಂರಕ್ಷಕರು ( ಈ ಕೃತಿಯು ಆಂಗ್ಲ ಭಾಷೆಯಲ್ಲಿ ವಾಟರ್ ಹೀರೋಸ್ ಎಂದಿದೆ) ‘ನೇಚರ್ ಅವರ್ ಫ್ಯೂಚರ್" ಪುಸ್ತಕ ಬರೆದು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಐದು ರೆಕಾರ್ಡ್ ಬುಕ್ಗಳಲ್ಲಿ ಹೆಸರು ಮಾಡಿದೆ. 

 

ಮಾನ್ಯ ಹರ್ಷ