ಒಂದಾನೊಂದು ಕಾಲದಲ್ಲಿ 2020 ( ಲಾಕ್ಡೌನ್ ನೆನಪುಗಳು)

Author : ಮಾನ್ಯ ಹರ್ಷ

Pages 89

₹ 111.00
Year of Publication: 2021
Published by: ಬಿ.ಎಫ್. ಸಿ. ಪಬ್ಲಿಕೇಷನ್ಸ್
Address: ಸಿ.ಪಿ. 61, ವಿರಾಜ್ ಖಂಡ, ಗೋಮಿತಿ ನಗರ, ಲಕ್ನೊ, ಉತ್ತರ ಪ್ರದೇಶ-226010
Phone: 05224026940

Synopsys

ಒಂದಾನೊಂದು ಕಾಲದಲ್ಲಿ( 2020 ಲಾಕ್ಡೌನ್ ಡೈರೀಸ್) ಮಾನ್ಯಾ ಹರ್ಷ ಅವರ ಎರಡನೆಯ ಕನ್ನಡ ಕಾದಂಬರಿ. 2020 ರ ಮಹಾಮಾರಿ ಕೋವಿಡ್- 19 ಲಾಕ್ ಡೌನ್ ಸಮಯದಲ್ಲಿ ಯುವ ಮನಸ್ಸುಗಳ ಸುತ್ತ ಹೆಣೆಯಲಾದ ವಿವಿಧ ನೈಜ ನಿದರ್ಶನಗಳು ಮತ್ತು ಘಟನೆಗಳ ನೋಟವನ್ನು ಈ ಕಾದಂಬರಿ ನೀಡುತ್ತದೆ. 

2020, ಒಂದು ಸಣ್ಣ ವೈರಾಣುವಿನ ಆರ್ಭಟಕ್ಕೆ ಹೆದರಿ , ಇಡೀ ಮನುಕುಲವು ಸಾಮಾಜಿಕ, ಆರ್ಥಿಕ, ಮಾನಸಿಕ ಅನಿಶ್ಚಿತತೆ, ಆತಂಕ ಮತ್ತು ಭಯವನ್ನು ಅನುಭವಿಸುತ್ತಿದ್ದರೆ, ಲೇಖಕಿ ಮಾತ್ರ ಲಾಕ್‌ಡೌನ್‌ನ ಸಕಾರಾತ್ಮಕ ಅಂಶಗಳ ಮೇಲೆ ಬೆಳಕು ಚೆಲ್ಲುತ್ತಾರೆ. ಮಕ್ಕಳ ಗುಂಪಿನ ನಡುವಿನ ಚರ್ಚೆಯೊಂದಿಗೆ ತೆರೆದುಕೊಳ್ಳುವ ಕಥೆ, ಸಾಗಿದಂತೆ , ತಂದೆ-ಮಗಳು, ಒಡಹುಟ್ಟಿದವರ ಸಂಬಂಧದ ಕ್ಲೀಷೆ, ಮಕ್ಕಳು ಮತ್ತು ಪೋಷಕರಲ್ಲಿ ಉಂಟಾಗುವ ಭಯ, ಮಾನಸಿಕ ಒತ್ತಡ, ಆಘಾತ, ತಾಯಿಯ ಗೌಂದಲ, ಹಳೆಯ ಹವ್ಯಾಸವನ್ನು ಪುನರಾರಂಭಿಸುವುದು, ಸೋಮಾರಿಯಾಗಿದ್ದವ ಯುವ ವಿಜ್ಞಾನಿ ಯಾದ ಬಗೆ ; ಎಷ್ಟೇ ಹಣವಿದ್ದರೂ ಮಗನನ್ನು ಮನೆಗೆ ಕರೆಸಿಕೊಳ್ಳುಲು ಸಾಧ್ಯವಾಗದ ಅಸಹಾಯಕ ತಂದೆ, ವಿನಾಶದಿಂದ ಪುನರ್ ನಿರ್ಮಾಣದತ್ತ ಪ್ರಕೃತಿಯ ಪಯಣ, ಹೀಗೆ ಪುಸ್ತಕವು ವಿವಿಧ ಸಣ್ಣ ನಿದರ್ಶನಗಳು ಮತ್ತು ಘಟನೆಗಳ ಸುತ್ತ ಸುತ್ತುತ್ತದೆ. 
 

About the Author

ಮಾನ್ಯ ಹರ್ಷ

ಕಿರಿ ವಯಸ್ಸಿನ ಲೇಖಕಿ ಮಾನ್ಯ ವರ್ಷ ಅವರು ಬೆಂಗಳೂರಿನ ಬಿಟಿಎಂ ಲೇಔಟ್ ನಲ್ಲಿರುವ ವಿಬ್ಗಿಯರ್ ಶಾಲೆಯಲ್ಲಿ 5ನೇ ತರಗತಿ ವಿದ್ಯಾರ್ಥಿನಿ. ತಂದೆ ಹರ್ಷ, ತಾಯಿ ಚಿತ್ರ. ಅಜ್ಜಿಯಿಂದ ಕೇಳಿದ ಕಥೆಗಳಿಂದ ತಾನು ಬರೆಯಲು ಸ್ಫೂರ್ತಿ ಎಂಬುದು ಅವರ ಅಭಿಮಾನ. ಇಂಡಿಯಾ ಬುಕ್ ಆಫ್ ರೆಕಾರ್ಡ್ ಮತ್ತು ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ ವತಿಯಿಂದ " ಕನ್ನಡದ ಕಿರಿಯ ಲೇಖಕಿ " ಎಂದು ಹಾಗೂ ವಜ್ರ ಬುಕ್ ಆಫ್ ರೆಕಾರ್ಡ್ ವತಿಯಿಂದ " ಭಾರತದ ಕಿರಿಯ ಕವಿಯಿತ್ರಿ" ಎಂಬ ಬಿರುದು ಪಡೆದ ಕೀರ್ತಿ ಅವರದ್ದು.  ಭಾರತ ಕೇಂದ್ರ ಸರಕಾರ ಹಮ್ಮಿಕೊಂಡಿದ್ದ ...

READ MORE

Related Books