About the Author

ಕಥೆಗಾರ, ರಂಗಕರ್ಮಿ ಮಹಾದೇವ ಹಡಪದ ನಟುವರ ಮೂಲತಃ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಾಪುರ ಗ್ರಾಮದವರು.ಕನ್ನಡ ಹಾಗೂ ಬಿಎಸ್ ಡಬ್ಲ್ಯೂ ಸ್ನಾತಕೋತ್ತರ ಪದವೀಧರರು. ರಂಗ ಅಭಿನಯ ಕಲೆಯಲ್ಲಿ ಡಿಪ್ಲೊಮಾ ಪದವೀಧರರು. ಸದ್ಯ ಧಾರವಾಡದಲ್ಲಿ ವಾಸ. ರಾಜ್ಯ ಯುವಜನ ಮೇಳದಲ್ಲಿ ದೊಡ್ಡಾಟ, ಜನಪದ ನೃತ್ಯ, ವೀರಗಾಸೆ ಕುಣಿತ ಪ್ರದರ್ಶನ, ಡಿಡಿ ಚಂದನದಲ್ಲಿ ವೀರಗಾಸೆ ಪ್ರದರ್ಶನ. 

ಆಧುನಿಕ ರಂಗಭೂಮಿ ಅನುಭವ: ನೀನಾಸಂ ತಿರುಗಾಟದಲ್ಲಿ ನಟರು, ತಂತ್ರಜ್ಞರಾಗಿದ್ದರು. ‌ಜೀ. ಕೆ ಮಾಸ್ತರರ ಪ್ರಣಯ ಪ್ರಸಂಗ, ಅಗಮೆಮ್ನಾನ್, ಯಶೋಧರಾ, ಮಹಾರಾತ್ರಿ, ಎನಿಮಿ ಆಫ್ ದಿ ಪೀಪಲ್, ಶ್ರದ್ಧಾ ಮತ್ತು ಹಣತೆ, ಉಚಲ್ಯಾ, ರಹಸ್ಯ ವಿಶ್ವ, ತಬರನ ಕತೆ, ಪಾತರಗಿತ್ತಿ ಪಕ್ಕ, ರೋಮಿಯೋ ಜೂಲಿಯಟ್, ಮರ್ಚಂಟ್ ಆಫ್ ವೆನಿಸ್,  ರಮಾಯಿ, ಮತ್ತೊಬ್ಬ ಮಾಯಿ, ಪ್ಲೀಜ್ ಅರೆಸ್ಟ್ ಮೀ ಮುಂತಾದ 80 ಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸಿದ್ದಾರೆ.

ವಸುಧೆಯೋಳು, ಚಕೋರಿ, ಶಿವರಾತ್ರಿ, ಹೂಂ ಬಸಣ್ಣ, ದೇಸಗತಿ, ಹೊಲಗೇರಿ ರಾಜಕುಮಾರ, ಟಿಪೂ ಕಂಡ ಕನಸು, ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ಸ್, ಒಥೆಲೋ, ಹಂಚಿನಮನೆ ಪರಸಪ್ಪ ಸೇರಿದಂತೆ ಇತರೆ ಟಕಗಳನ್ನು ನಿರ್ದೇಶಿಸಿದ್ದಾರೆ.   ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ಅಭಿನಯ ಶಿಕ್ಷಕರು, ಸಾಣೆಹಳ್ಳಿ ಶಿವಕುಮಾರ ರಂಗಪ್ರಯೋಗಶಾಲೆಯಲ್ಲಿ ಅಭಿನಯ ಶಿಕ್ಷಕರು,ಜನಮನದಾಟ ಹೆಗ್ಗೋಡು ತಂಡದ ಸಂಸ್ಥಾಪಕ ಸದಸ್ಯರು, ಶಾಲೆ ಬಿಟ್ಟ ಪ್ರತಿಭಾವಂತರಿಗಾಗಿ ಧಾರವಾಡ ತಾಲ್ಲೂಕಿನ ಮುಗದ ( 2017 ರಲ್ಲಿ) ಗ್ರಾಮದಲ್ಲಿ ಸಂಕುಲ ಥಿಯೇಟರ್ ಸ್ಕೂಲ್ ಆರಂಭಿಸಿದ್ದಾರೆ. 

 

ಮಹಾದೇವ ಹಡಪದ ನಟುವರ