ಬಯಲುಡುಗೆಯ ಬೊಂತಾ

Author : ಮಹಾದೇವ ಹಡಪದ ನಟುವರ

Pages 130

₹ 140.00




Year of Publication: 2020
Published by: ಪುಳಕ ಪುಸ್ತಕ ಪ್ರಕಾಶನ
Address: ಧಾರವಾಡ

Synopsys

ಮಹಾದೇವ ಹಡಪದ ನಟುವರ ಅವರ ಕಥೆಗಳ ಸಂಕಲನ-ಬಯಲುಡುಗೆಯ ಬೊಂತಾ. ಕೃತಿಗೆ ಬೆನ್ನುಡಿ ಬರೆದ ಲೇಖಕಿ ಕೆ.ಆರ್. ಮಂಗಳಾ ‘ತಮ್ಮದೇ ಆದ ವಿಶಿಷ್ಟ ಶೈಲಿಯ ಕಥೆಗಳು ಇತಿಹಾಸದ ಎಳೆಗಳನ್ನು ಹಿಡಿದುಕೊಂಡು ಪುಟದಿಂದ ಪುಟಕ್ಕೆ ಕುತೂಹಲದ ಹೆಜ್ಜೆಯಲ್ಲಿ ನಡೆಸುತ್ತವೆ. ಪ್ರಪಂಚವು ಎರಡು ವಿಷಯಗಳಿಂದ ರೂಪಿಸಲ್ಪಟ್ಟಿದೆ. ಹೇಳಲಾದ ಕಥೆಗಳು ಮತ್ತು ಅವುಗಳು ಬಿಟ್ಟು ಹೋದ ನೆನಪುಗಳು. ಮರೆಯಲಾಯಗದ, ಮರೆಯಬಾರದ ಶರಣ ಸಮುದಾಯವನ್ನು  ಎದೆಯೊಳಗಿರಿಸುವ ಕಲ್ಯಾಣದ ಇಲ್ಲಿಯ ಕಥೆಗಳು ‘ಬಯಲು’ ಬ್ಲಾಗ್ ನಲ್ಲಿ ಈಗಾಗಲೇ ಮೆಚ್ಚುಗೆ ಗಳಿಸಿವೆ. ನಡೆ-ನುಡಿಗಳಲ್ಲಿ ಒಂದಾದ ಊರಾವುದು ಎಂದು ಹುಡುಕುತ್ತಾ ನಡೆದವರ ಕತೆಗಳಿವು. ತಮ್ಮ ವಿಶಿಷ್ಟ ಭಾವಾಭಿನಯದಿಂದ ಗಮನ ಸಳೆದ ರಂಗಭೂಮಿ ಕಲಾವಿದರಾದ ಹಡಪದ ಅವರೊಳಗೆ ಒಬ್ಬ ಕತೆಗಾರನಿದ್ದಾನೆ. ಇಲ್ಲಿ ಅರಗಿಣಿಗಳು ಮಾತಾಡುತ್ತವೆ.ಕನಸುಗಳು ಮನದ ಕದ ತೆರೆದು ನಡೆಯಬೇಕಾದ ದಾರಿ ತೋರುತ್ತವೆ.ಮನದ ಹಕ್ಕಿ ಒಳಮಾತಿಗೆ ಕಿವಿಕೊಡುವುದನ್ನು ಕಲಿಸುತ್ತದೆ.’ ಎಂದು ಪ್ರಶಂಸಿಸಿದ್ದಾರೆ.

About the Author

ಮಹಾದೇವ ಹಡಪದ ನಟುವರ

ಕಥೆಗಾರ, ರಂಗಕರ್ಮಿ ಮಹಾದೇವ ಹಡಪದ ನಟುವರ ಮೂಲತಃ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಾಪುರ ಗ್ರಾಮದವರು.ಕನ್ನಡ ಹಾಗೂ ಬಿಎಸ್ ಡಬ್ಲ್ಯೂ ಸ್ನಾತಕೋತ್ತರ ಪದವೀಧರರು. ರಂಗ ಅಭಿನಯ ಕಲೆಯಲ್ಲಿ ಡಿಪ್ಲೊಮಾ ಪದವೀಧರರು. ಸದ್ಯ ಧಾರವಾಡದಲ್ಲಿ ವಾಸ. ರಾಜ್ಯ ಯುವಜನ ಮೇಳದಲ್ಲಿ ದೊಡ್ಡಾಟ, ಜನಪದ ನೃತ್ಯ, ವೀರಗಾಸೆ ಕುಣಿತ ಪ್ರದರ್ಶನ, ಡಿಡಿ ಚಂದನದಲ್ಲಿ ವೀರಗಾಸೆ ಪ್ರದರ್ಶನ.  ಆಧುನಿಕ ರಂಗಭೂಮಿ ಅನುಭವ: ನೀನಾಸಂ ತಿರುಗಾಟದಲ್ಲಿ ನಟರು, ತಂತ್ರಜ್ಞರಾಗಿದ್ದರು. ‌ಜೀ. ಕೆ ಮಾಸ್ತರರ ಪ್ರಣಯ ಪ್ರಸಂಗ, ಅಗಮೆಮ್ನಾನ್, ಯಶೋಧರಾ, ಮಹಾರಾತ್ರಿ, ಎನಿಮಿ ಆಫ್ ದಿ ಪೀಪಲ್, ಶ್ರದ್ಧಾ ಮತ್ತು ಹಣತೆ, ಉಚಲ್ಯಾ, ರಹಸ್ಯ ವಿಶ್ವ, ತಬರನ ಕತೆ, ಪಾತರಗಿತ್ತಿ ಪಕ್ಕ, ...

READ MORE

Related Books