About the Author

ಲೇಖಕ ಮಹಮ್ಮದ್‌ ಕಲೀಂಉಲ್ಲ ಅವರು ಮೂಲತಃ ಮಂಡ್ಯ ಜಿಲ್ಲೆಯ ನಾಗಮಂಗಲದವರು. ಮುಸ್ಲಿಂ ಜನಾಂಗದ ಮೇಧಾವಿಗಳಾಗಿದ್ದ ಖಾಜಿ ಮಹಮ್ಮದ್‌ ಅಬ್ಬಾಸ್‌ ಸಾಹೇಬರ ಮೊಮ್ಮಗ. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನಂತರ ಪ್ರೌಢ ಶಾಲಾ ಅಧ್ಯಾಪಕರಾಗಿ ನಿವೃತ್ತರಾದರು. ವೈಯುಕ್ತಿಕ ಕುತೂಹಲ ಮತ್ತು ಅಧ್ಯಯನಾಸಕ್ತಿಯಿಂದ ಭಾರತವನ್ನು ಸುತ್ತಿದ ಹೆಗ್ಗಳಿಕೆ ಇವರದ್ದು. ಸ್ಥಳೀಯ ಇತಿಹಾಸದ ಪರಿಚಯ, ಪ್ರಾಚೀನ ಶಾಸನಗಳ ಹಾಗೂ ಐತಿಹಾಸಿಕ ಸಂರಕ್ಷಣೆಗಳ ಬಗೆಗೆ ಅಸಕ್ತಿ ಮೂಡಿಸುವುದು ಇವರ ಹವ್ಯಾಸ. ಹಲವಾರು ಶಿಥಿಲ ದೇವಾಲಯಗಳನ್ನು, ಸ್ಮಾರಕಗಳನ್ನೂ ಧರ್ಮಸ್ಥಳದ ಅಡಳಿತದ ಮೂಲಕ ಪುನರುಜ್ಜೀನಗೊಳಿಸಲು ಶ್ರಮಿಸಿದ್ದಾರೆ.  ಬೇಂದ್ರೆ ಸ್ಮಾರಕ ಪ್ರತಿಷ್ಠಾನ ಸೇರಿದಂತೆ ಅನೇಕ ಸಂಘ ಸಂಸ್ಥೆಗಳಿಂದ ಪುರಸ್ಕೃತರಾಗಿದ್ದಾರೆ.

ಕೃತಿಗಳು; ನಾಗಮಂಗಲ ತಾಲ್ಲೂಕು ದರ್ಶನ, ಮಳವಳ್ಳಿ ತಾಲ್ಲೂಕ ಶಾಸನಗಳು, ಪ್ರವಾದಿ ವಚನಾಮೃತ.

ಮಹಮ್ಮದ್‌ ಕಲೀಂಉಲ್ಲ