ಮರೆತುಹೋದ ಮಹಾನುಭಾವ ಎಂ. ಶಂಕರಲಿಂಗೇಗೌಡ

Author : ಮಹಮ್ಮದ್‌ ಕಲೀಂಉಲ್ಲ

Pages 184

₹ 220.00




Year of Publication: 2021
Published by: ವಿಕಸನ ಪ್ರಕಾಶನ
Address: ವಿಜ್ಞಾತಂ ಭವನ, ಅದಿಚುಂಚನಗಿರಿ ವಿಶ್ವವಿದ್ಯಾಲಯ, ಬಿ.ಜಿ. ನಗರ, ನಾಗಮಂಗಲ ತಾಲೂಕು, ಮಂಡ್ಯ-571448.

Synopsys

‘ಮರೆತುಹೋದ ಮಹಾನುಭಾವ ಎಂ. ಶಂಕರಲಿಂಗೇಗೌಡ’ ಕೃತಿಯು ಒಕ್ಕಲಿಗರ ಸಾಧಕರ  ಜೀವನಚರಿತ್ರೆಯಾಗಿದೆ. ಲೇಖಕ ಮಹಮ್ಮದ್‌ ಕಲೀಂಉಲ್ಲ ಅವರು ರಚಿಸಿದ್ದಾರೆ. ಕೃತಿಯ ಪರಿವಿಡಿಯಲ್ಲಿ ಅರಂಭ ಜೀವನ ಮತ್ತು ಸಾಧನೆ, ರಾಜನಿಯೋಜಿತ ಪ್ರಜಾಪ್ರಭುತ್ವ, ಭಟ್ಕಳ ಬಂದರು ಯೋಜನೆ, ಬರೋಡ ಸಂಸ್ಥೆಯಲ್ಲಿ ಗೌಡರ ಸೇವೆ, ತೆರಿಗೆದಾರರ ಹಣದ ಅಸಮರ್ಪಕ ಹಂಚಿಕೆ, ಮದ್ರಾಸು ಬೊಂಬಾಯಿ, ಮೈಸೂರು ಮತ್ತು ಡೆಕ್ಕನ್‌ ರಾಜ್ಯಗಳ ಕೃಷಿ ಮತ್ತು ಜವಳಿಯ ಆರ್ಥಿಕ ಯೋಜನೆ, ನೆಮ್ಮದಿಯ ಸಮಾಜ, ಪೀತಪುರಂ ಸಂಸ್ಥಾನದಲ್ಲಿ ಗೌಡರು, ಕರ್ನಾಟಕದ ಏಕೀಕರಣ, ಶ್ರೀಗುರುಗಳ ನಿರೂಪ, ನಾಗಮಂಗಲ ಪಟ್ಟಣಕ್ಕೆ ಹೈಸ್ಕೂಲು ಮಂಜೂರು ಮಾಡಿಸುವ ಪ್ರಸಂಗ, ನಾಗಮಂಗಲದಲ್ಲಿ ನಡೆದ ಸಾರ್ವಜನಿಕ ಸಭೆಯ ನಿರ್ಣಯ, ಸದನದಲ್ಲಿ ಗೌಡರು, ಅನುಬಂಧ ಅಧ್ಯಾಯಗಳನ್ನು ಕೃತಿಯು ಒಳಗೊಂಡಿದೆ.

ಮೈಲಾರಪಟ್ಟಣ ಶಂಕರಲಿಂಗೇಗೌಡರು ನಮ್ಮ ನಾಡಿನ ಒಬ್ಬ ಅಪೂರ್ವ ಮೇಧಾವಿ, ಎಲ್ಲ ಸಾಮಾಜಿಕ ಗಡಿಗಳನ್ನು ಮೀರಿದ ಮಹಾನುಭಾವ, ಅರ್ಥಶಾಸ್ತ್ರಜ್ಞ ಛಲಗಾರ, ಸ್ವಾಭಿಮಾನಿ, ತೀಕ್ಷ್ಮಮತಿ, ಅಸ್ಬಲಿತ ವಾಕ್ಪಟು. ಇಂತಹ ಮಹಾನುಭಾವನನ್ನು ನಮ್ಮ ಸಮಾಜ ಮರೆತುಬಿಟ್ಟಿದೆ. ಇವರು ನಮ್ಮ ನಾಡಿನ ಅರ್ಥವ್ಯವಸ್ಥೆ, ಅದರ ಪುನರುಜ್ಜೀವನ, ಗ್ರಾಮೀಣ ಆರ್ಥಿಕತೆ ಮುಂತಾದ ಹಲವು ವಿಷಯಗಳನ್ನು ಕುರಿತು 30ಕ್ಕೂ ಹೆಚ್ಚು ಕೃತಿಗಳನ್ನು ಇಂಗ್ಲಿಷ್ ಭಾಷೆಯಲ್ಲಿ ರಚಿಸಿದ್ದಾರೆ. ಇಡೀ ನಾಗಮಂಗಲ ತಾಲ್ಲೂಕಿನ ಸಮಗ್ರ ಅಂಕಿಅಂಶಗಳನ್ನು ಅತ್ಯಂತ ಪರಿಶ್ರಮದಿಂದ ಸಂಗ್ರಹಿಸಿ ತಾಲ್ಲೂಕಿನ ಸರ್ವತೋಮುಖ ಅಭಿವೃದ್ಧಿಗೆ ನೀಲನಕ್ಷೆ ತಯಾರಿಸಿದ್ದರು. ಪ್ರಜಾಪ್ರತಿನಿಧಿ ಸಭೆ ಮತ್ತು ಶಾಸನಸಭೆಯ ಸದಸ್ಯರಾಗಿದ್ದವರು ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಆರ್ಥಿಕ ಸಲಹೆಗಾರರಾಗಿದ್ದಾರೆ. ಶಂಕರಂಗೇಗೌಡರ ಜೀವನ, ವಿಚಾರಗಳು, ಕಾರ್ಯಕ್ಷೇತ್ರ ಮುಂತಾದುವನ್ನು ಕುರಿತು ಮಹಮ್ಯದ್ ಕಲೀಂಉಲ್ಲ ಅವರು 'ಮರೆತುಹೋದ ಮಹಾನುಭಾವ ಎಂ. ಶಂಕರಲಿಂಗೇಗೌಡ' ಕೃತಿಯಲ್ಲಿ ಕಾಣಿಸಿದೆ ಎಂದು ಕೃತಿಯ ಬೆನ್ನುಡಿಯಲ್ಲಿ ವಿವರಿಸಲಾಗಿದೆ. 

 

About the Author

ಮಹಮ್ಮದ್‌ ಕಲೀಂಉಲ್ಲ

ಲೇಖಕ ಮಹಮ್ಮದ್‌ ಕಲೀಂಉಲ್ಲ ಅವರು ಮೂಲತಃ ಮಂಡ್ಯ ಜಿಲ್ಲೆಯ ನಾಗಮಂಗಲದವರು. ಮುಸ್ಲಿಂ ಜನಾಂಗದ ಮೇಧಾವಿಗಳಾಗಿದ್ದ ಖಾಜಿ ಮಹಮ್ಮದ್‌ ಅಬ್ಬಾಸ್‌ ಸಾಹೇಬರ ಮೊಮ್ಮಗ. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನಂತರ ಪ್ರೌಢ ಶಾಲಾ ಅಧ್ಯಾಪಕರಾಗಿ ನಿವೃತ್ತರಾದರು. ವೈಯುಕ್ತಿಕ ಕುತೂಹಲ ಮತ್ತು ಅಧ್ಯಯನಾಸಕ್ತಿಯಿಂದ ಭಾರತವನ್ನು ಸುತ್ತಿದ ಹೆಗ್ಗಳಿಕೆ ಇವರದ್ದು. ಸ್ಥಳೀಯ ಇತಿಹಾಸದ ಪರಿಚಯ, ಪ್ರಾಚೀನ ಶಾಸನಗಳ ಹಾಗೂ ಐತಿಹಾಸಿಕ ಸಂರಕ್ಷಣೆಗಳ ಬಗೆಗೆ ಅಸಕ್ತಿ ಮೂಡಿಸುವುದು ಇವರ ಹವ್ಯಾಸ. ಹಲವಾರು ಶಿಥಿಲ ದೇವಾಲಯಗಳನ್ನು, ಸ್ಮಾರಕಗಳನ್ನೂ ಧರ್ಮಸ್ಥಳದ ಅಡಳಿತದ ಮೂಲಕ ಪುನರುಜ್ಜೀನಗೊಳಿಸಲು ಶ್ರಮಿಸಿದ್ದಾರೆ.  ಬೇಂದ್ರೆ ಸ್ಮಾರಕ ಪ್ರತಿಷ್ಠಾನ ಸೇರಿದಂತೆ ಅನೇಕ ಸಂಘ ಸಂಸ್ಥೆಗಳಿಂದ ಪುರಸ್ಕೃತರಾಗಿದ್ದಾರೆ. ಕೃತಿಗಳು; ನಾಗಮಂಗಲ ತಾಲ್ಲೂಕು ದರ್ಶನ, ಮಳವಳ್ಳಿ ತಾಲ್ಲೂಕ ...

READ MORE

Related Books