About the Author

ಮಹೇಶ ಮನ್ನಯ್ಯನವರಮಠ ಮೂಲತಃ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ರನ್ನಬೆಳಗಲಿ ಪಟ್ಟಣದವರು. ಕಳೆದ ಮೂರು ದಶಕದಿಂದ ಮಹಾಲಿಂಗಪುರದಲ್ಲಿ ವಾಸವಿದ್ದಾರೆ. ಬಿ.ಕಾಂ ಪದವೀಧರರು. ಧಾರವಾಡ ಹಾಗೂ ವಿಜಯಪುರ ಆಕಾಶವಾಣಿ ಕೇಂದ್ರದಿಂದ ಯುವವಾಣಿಯಲ್ಲಿ ಕಥೆಗಳು ಹಾಗೂ ವರದಿಗಳು ಪ್ರಸಾರವಾಗಿವೆ. ನಾಡಿನ ವಿವಿಧ ಪತ್ರಿಕೆಗಳು ಸೇರಿದಂತೆ ವರದಿಗಾರರಾಗಿ ಕೆಲಸ ಮಾಡಿದ್ದು, ಸದ್ಯ ಪ್ರಜಾವಾಣಿಯ ಮಹಾಲಿಂಗಪುರದ ವರದಿಗಾರರು. 

ಕೃತಿಗಳು: ನನ್ನ ಕಾವ್ಯ (ಕವನ ಸಂಕಲನ), ಬಾಗಿಲೊಳು ಕೈಮುಗಿದು (ಐತಿಹಾಸಿಕ ದೇವಾಲಯಗಳ ಪರಿಚಯ), ಕಾಡುವ ಮನಸುಗಳು, ಮನಸುಗಳ ಬೆನ್ನತ್ತಿ, ತುಂಬಿದ ಕೊಡಗಳು (ಲಲಿತ ಪ್ರಬಂಧಗಳು)

ಪ್ರಶಸ್ತಿ-ಪುರಸ್ಕಾರಗಳು: ‘ನನ್ನ ಕಾವ್ಯ’ ಕವನಸಂಕಲನಕ್ಕೆ ಛಲಗಾರ ಪತ್ರಿಕೆಯಿಂದ ಸಾಹಿತ್ಯ ಶ್ರೀ ಪ್ರಶಸ್ತಿ, ‘ಬಾಗಿಲೊಳು ಕೈಮುಗಿದು’ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್‌ನಿಂದ 2004ನೇ ಸಾಲಿನ ರತ್ನಾಕರವರ್ಣಿ-ಮುದ್ದಣ್ಣ-ಅನಾಮಿಕ ಪ್ರಶಸ್ತಿ, ‘ಕಾಡುವ ಮನಸುಗಳು’ ಕೃತಿಗೆ 2019ನೇ ಸಾಲಿನ ಖಾಡೆ ಸಾಹಿತ್ಯ ಪ್ರತಿಷ್ಠಾನದ ಪುಸ್ತಕ ಪ್ರಶಸ್ತಿ ದೊರೆತಿದೆ. ಪತ್ರಿಕೋದ್ಯಮ ಸಾಧನೆಗೆ ಮುಧೋಳ ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ ಹಾಗೂ ಜಮಖಂಡಿ ಎಂಆರ್‌ಎನ್ ಫೌಂಡೇಷನ್ ಹಾಗೂ ಚಿಮ್ಮಡ ವಿರಕ್ತಮಠದಿಂದ ವಿಶೇಷ ಸನ್ಮಾನ ದೊರೆತಿದೆ.

ಮಹೇಶ ಮನ್ನಯ್ಯನವರಮಠ