ಬಾಗಿಲೊಳು ಕೈ ಮುಗಿದು

Author : ಮಹೇಶ ಮನ್ನಯ್ಯನವರಮಠ

Pages 54

₹ 30.00




Year of Publication: 2004
Published by: ಮಾಸ್ಟರ್ ಪ್ರಕಾಶನ ಸಂಸ್ಥೆ
Address: ಮಾಸ್ಟರ್ ಪ್ರಕಾಶನ ಸಂಸ್ಥೆ, ಬನಹಟ್ಟಿ

Synopsys

ಬಾಗಿಲೊಳು ಕೈಮುಗಿದು- ಐತಿಹಾಸಿಕ ದೇವಾಲಯಗಳ ಪರಿಚಯ ಹೊಂದಿರುವ ಕೃತಿ. ಕನ್ನಡ ಸಾಹಿತ್ಯ ಪರಿಷತ್‌ನಿಂದ ರತ್ನಾಕರವರ್ಣಿ ಮುದ್ದಣ್ಣ ಅನಾಮಿಕ ಪ್ರಶಸ್ತಿ ಪಡೆದಿದೆ. ರನ್ನಬೆಳಗಲಿಯ ಅಮೃತೇಶ್ವರ ದೇವಾಲಯ, ಕೊಕಟನೂರಿನ ಕಲ್ಮೇಶ್ವರ ದೇವಾಲಯ, ಸಾವಳಗಿಯ ಸೋಮೇಶ್ವರ ದೇವಾಲಯ, ಅಣ್ಣಿಗೇರಿಯ ಅಮೃತೇಶ್ವರ ದೇವಾಲಯ, ಸತ್ತಿಯ ಬದರಿ ನಾರಾಯಣ ದೇವಾಲಯ, ಮುಧೋಳದ ಶಿವ ದೇವಾಲಯ, ಉಪ್ಪಲದಿನ್ನಿಯ ಮಲ್ಲಿಕಾರ್ಜುನ ದೇವಾಲಯ, ಐನಾಪುರದ ವಿಶ್ವನಾಥ ದೇವಾಲಯ, ಜಮಖಂಡಿಯ ಜಂಭುಕೇಶ್ವರ ದೇವಾಲಯ ಹಾಗೂ ಲಕ್ಕುಂಡಿಯ ದೇವಾಲಯಗಳ ಮಾಹಿತಿಯನ್ನು ಪುಸ್ತಕ ಒಳಗೊಂಡಿದೆ. ಎಲೆಮರೆಯ ಕಾಯಿಯಂತಿರುವ ದೇವಾಲಯಗಳನ್ನು ಕನ್ನಡಿಗರಿಗೆ ಕಣ್ಣೆದುರು ತಂದು ನಿಲ್ಲಿಸುವ ಪ್ರಯತ್ನವಿದು ಎಂದು ಡಾ.ಶೀಲಾಕಾಂತ ಪತ್ತಾರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಊರಿನ ಇಲ್ಲವೆ ದೇವಾಲಯದ ಐತಿಹಾಸಿಕ ಹಿನ್ನೆಲೆ, ಅರಸರ ಕಲಾಪ್ರಿಯತೆ, ರೂವಾರಿ ಸ್ವಪತಿಗಳ ವೈಜ್ಞಾನಿಕ ಹಾಗೂ ಕಲಾತ್ಮಕ ಸಾಧನೆ ಇವುಗಳ ಬಗ್ಗೆ ಲೇಖಕರು ಓದುಗರ ಕಣ್ಣು ತೆರೆಸುತ್ತಾರೆ. ತಮ್ಮ ನಿರೂಪಣೆಗೆ ಶಿಲಾಲಿಪಿಗಳ ಆಧಾರವನ್ನು ನೀಡುತ್ತ ವಸ್ತುನಿಷ್ಠತೆಯನ್ನು ತೋರಿಸಿದ್ದಾರೆ. ದೇವಾಲಯಗಳ ಬಗೆಗಿರುವ ಊರಿನವರ ಅಲಕ್ಷ್ಯ, ಅಜ್ಞಾನವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಾಗಕರಿಕರು ತಮ್ಮ ಹೊಣೆಗಾರಿಯನ್ನು ಅರಿತುಕೊಳ್ಳಬೇಕೆಂದು ವಿನಂತಿಸಿದ್ದಾರೆ’ ಎಂದು ಪತ್ತಾರ ಮುನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಮಹೇಶ ಮನ್ನಯ್ಯನವರಮಠ

ಮಹೇಶ ಮನ್ನಯ್ಯನವರಮಠ ಮೂಲತಃ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ರನ್ನಬೆಳಗಲಿ ಪಟ್ಟಣದವರು. ಕಳೆದ ಮೂರು ದಶಕದಿಂದ ಮಹಾಲಿಂಗಪುರದಲ್ಲಿ ವಾಸವಿದ್ದಾರೆ. ಬಿ.ಕಾಂ ಪದವೀಧರರು. ಧಾರವಾಡ ಹಾಗೂ ವಿಜಯಪುರ ಆಕಾಶವಾಣಿ ಕೇಂದ್ರದಿಂದ ಯುವವಾಣಿಯಲ್ಲಿ ಕಥೆಗಳು ಹಾಗೂ ವರದಿಗಳು ಪ್ರಸಾರವಾಗಿವೆ. ನಾಡಿನ ವಿವಿಧ ಪತ್ರಿಕೆಗಳು ಸೇರಿದಂತೆ ವರದಿಗಾರರಾಗಿ ಕೆಲಸ ಮಾಡಿದ್ದು, ಸದ್ಯ ಪ್ರಜಾವಾಣಿಯ ಮಹಾಲಿಂಗಪುರದ ವರದಿಗಾರರು.  ಕೃತಿಗಳು: ನನ್ನ ಕಾವ್ಯ (ಕವನ ಸಂಕಲನ), ಬಾಗಿಲೊಳು ಕೈಮುಗಿದು (ಐತಿಹಾಸಿಕ ದೇವಾಲಯಗಳ ಪರಿಚಯ), ಕಾಡುವ ಮನಸುಗಳು, ಮನಸುಗಳ ಬೆನ್ನತ್ತಿ, ತುಂಬಿದ ಕೊಡಗಳು (ಲಲಿತ ಪ್ರಬಂಧಗಳು) ಪ್ರಶಸ್ತಿ-ಪುರಸ್ಕಾರಗಳು: ‘ನನ್ನ ಕಾವ್ಯ’ ಕವನಸಂಕಲನಕ್ಕೆ ಛಲಗಾರ ಪತ್ರಿಕೆಯಿಂದ ಸಾಹಿತ್ಯ ಶ್ರೀ ...

READ MORE

Related Books