About the Author

ಚಿನ್ನಾರಿ ಕಾವ್ಯನಾಮದಿಂದ ಕನ್ನಡ ಸಾಹಿತ್ಯಲೋಕದಲ್ಲಿ ಗುರುತಿಸಿಕೊಂಡಿರುವ ಮಲ್ಲಪ್ಪ ಮೀಸಿಯವರ ಮೂಲತಃ ಧಾರವಾಡ ಜಿಲ್ಲೆಯ ಅಣ್ಣಿಗೇರಿಯವರು. ತಾಯಿ- ಕಸ್ತೂರಿ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮಾವನ ಆಶ್ರಯದಲ್ಲಿ, ಪ್ರೌಢ ಶಿಕ್ಷಣವನ್ನು ಹುಟ್ಟೂರಿನ ಅಮೃತೇಶ್ವರ ವಿದ್ಯಾಸಂಸ್ಥೆಯಲ್ಲಿ, ಕಾಲೇಜು ಶಿಕ್ಷಣವನ್ನು ಗದಗ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕಾಲೇಜು, ಹಾಗೂ ಪದವಿ ಶಿಕ್ಷಣ (B.Sc)- ರಾಜ್ಯದ ಹೆಮ್ಮೆಯ ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯ ಧಾರವಾಡದಲ್ಲಿ ನಂತರ ಸ್ನಾತಕೋತ್ತರ ಪದವಿ (M.Sc) - ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮೈಸೂರಿನಲ್ಲಿ ಪೂರೈಸಿದರು.

ಅಟಲ್ ಸಾಹಿತ್ಯ ವೇದಿಕೆಯಿಂದ ಅತ್ಯುತ್ತಮ ಯುವಕವಿ ಪ್ರಶಸ್ತಿ, 'ಬುಕ್ ಬ್ರಹ್ಮ' ಅವರ ವತಿಯಿಂದ ಜನ ಮೆಚ್ಚಿದ ಕವಿತೆ ಪ್ರಶಸ್ತಿಯನ್ನು ಪಡೆದುಕೊಂಡಿರುವ ಇವರು ಸಾಹಿತ್ಯ, ವಿಜ್ಞಾನ, ಕೃಷಿ, ಪರಿಸರ, ನಟನೆ, ನಿರ್ದೇಶನ, ಸಮಾಜಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕನ್ನಡದ ಆದಿ ಮಹಾಕವಿ ಪಂಪನ ಜನ್ಮಸ್ಥಳ ಅಣ್ಣಿಗೇರಿಯಲ್ಲಿ ಹುಟ್ಟಿ. ಕನ್ನಡ ಸಾಹಿತ್ಯ ಲೋಕಕ್ಕೆ ನಾಲ್ಕು ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಮಹಾ ಕವಿಗಳ ಮೂಲ ಬೇರಿರುವ ಕರ್ನಾಟಕ ಮಹಾವಿದ್ಯಾಲಯದಲ್ಲಿ ಕಲಿತು, ವಿಜ್ಞಾನದಲ್ಲಿ ಪದವಿ ಪಡೆದಿದ್ದರೂ ಸಾಹಿತ್ಯ ಆಸಕ್ತಿಯಿಂದ ಕನ್ನಡ ಸಾಹಿತ್ಯ ಭೂಮಿಯಲ್ಲಿ ಕವಿತೆಗಳನ್ನು ಬಿತ್ತಿ ಬೆಳೆಸುತ್ತಿದ್ದಾರೆ. 'ಚಿನ್ನಾರಿ' ಎಂಬ ಕಾವ್ಯನಾಮದಿಂದ ಕನ್ನಡ ಕುಲ ಕೋಟಿಗೆ ಪರಿಚಯಿಸಿಕೊಳ್ಳಲು ಇಚ್ಚಿಯಿಸಿದ್ದಾರೆ. ಬಾಲ್ಯದಿಂದಲೂ ಅಪಾರ ಆಸಕ್ತಿ ಹೊಂದಿದ ಕ್ಷೇತ್ರವಾದ ಪರಿಸರ ರಕ್ಷಣೆ, ಸಾವಯವ ಕೃಷಿ ಕೈಗೊಳ್ಳಲು ಸಮಾನ ಮನಸ್ಕ ಕನಸುಗಾರ ಸ್ನೇಹಿತರನ್ನೊಳಗೊಂಡ 'ಸ್ಪೂರ್ತಿಶರ' ಎಂಬ ತಂಡ ಕಟ್ಟಿಕೊಂಡು ಭೂತಾಯಿಗೆ ಹಸಿರುಡಿಸುತ್ತ ಸಾಗುತ್ತಿದ್ದಾರೆ.

ಕೃತಿಗಳು: ‘ಶೂನ್ಯಯಾನ’.

ಮಲ್ಲಪ್ಪ ಮೀಸಿಯವರ (ಚಿನ್ನಾರಿ)

(01 Feb 1996)