About the Author

ಮಲ್ಲಿಕಾರ್ಜುನ ಪಾಟೀಲ ಅವರು ಮೂಲತಃ ಧಾರವಾಡದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಹಾಗೂ ಪಿಎಚ್ ಡಿ ಮತ್ತು ಹೈದರಾಬಾದಿನ ಇಎಫ್ ಎಲ್ ವಿಶ್ವವಿದ್ಯಾಲಯದಿಂದ ಪಿಜಿಡಿಟಿಇ ಪದವೀಧರರು. ಇಂಗ್ಲೆಂಡಿನ ಆಕ್ಸ್ ಫರ್ಡ್ ನಲ್ಲಿ ಫೆಲೋಶಿಪ್ ಪಡೆದು ಅಧ್ಯಯನ ನಡೆಸಿದ್ದಾರೆ. ಗುಲಬರ್ಗಾ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ ಸಹಾಯಕ ಪ್ರೊಫೆಸರ್  ಹಾಗೂ ವಿಜಯಪುರ ಮಹಿಳಾ ವಿವಿಯಲ್ಲಿಅಸೋಶಿಯೇಟ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿದ್ದು, ಸದ್ಯ ಕರ್ನಾಟಕ ವಿ.ವಿ. ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

ರೇಡಿಯೋ-ಟಿ.ವಿ.ಗಳಲ್ಲಿ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ವಿದ್ವತ್ ಪೂರ್ಣ ವಿಚಾರಗಳನ್ನು ಮಂಡಿಸಿರುವ ಅವರು ಹಲವು ಪ್ರಬಂಧಗಳನ್ನೂ ಪ್ರಕಟಿಸಿದ್ದಾರೆ.  ತಮ್ಮ ವೃತ್ತಿಬದುಕಿನೊಂದಿಗೆ ಸಾಹಿತ್ಯಿಕ ಸೇವೆಯನ್ನೂ ಸಲ್ಲಿಸುತ್ತಿರುವ ಅವರು 'ಶಿವನಗೌಡ ಪಾಟೀಲ್' ಎಂಬ ಪ್ರಕಾಶನ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಕವಿ, ಕಥೆಗಾರ. ನಾಟಕಕಾರ, ವಿಮರ್ಶಕ ಹೀಗೆ ಹಲವು ಆಯಾಮಗಳಲ್ಲಿ ಅಧ್ಯಯನ ಪರಿಣಿತರಾಗಿರುವ ಮಲ್ಲಿಕಾರ್ಜುನ ಪಾಟೀಲ ಅವರು ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ.

ಮಲ್ಲಿಕಾರ್ಜುನ ಪಾಟೀಲ