About the Author

ಡಾ. ಮಂಜುನಾಥ ಬೇವಿನಕಟ್ಟಿ ಅವರು 1962  ಜೂನ್ 1 ರಂದು ಜನಿಸಿದರು. ಎಂ. ಎ. (ಜಾನಪದ) ಎಂ.ಎ. ( ಮನಃಶಾಸ್ತ್ರ ) ಪಿಎಚ್.ಡಿ ( ಜಾನಪದ ) ಪದವಿ ಪಡೆದ ಇವರು ಜಾನಪದ ಅಧ್ಯಯನ ವಿಭಾಗ ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಜನಪದ ಆಚರಣೆಗಳು ಮತ್ತು ನಂಬಿಕೆಗಳು,  ಮನೋವಿಜ್ಞಾನ : ಜನಪದ ಆಚರಣೆಗಳು ಮತ್ತು ದೈವಗಳು , ಮಹಿಳಾ ಅಧ್ಯಯನ ನೆಲೆಯಲ್ಲಿ ಜನಪದ ಆಚರಣೆ ಮತ್ತು ನಂಬಿಕೆಗಳು. ಗ್ರಾಮ ಅಧ್ಯಯನ ಇವರ ಆಸಕ್ತಿಯ ಅಧ್ಯಯನ ಕ್ಷೇತ್ರಗಳಾಗಿವೆ. ಕರ್ನಾಟಕ ಜನಪದ ದೈವಗಳು ವಿಶ್ವಕೋಶ, ಕರ್ನಾಟಕ ಜನಪದ ಕಲೆಗಳ ಕೋಶ, ಕರ್ನಾಟಕದಲ್ಲಿ ಕುಮಾರರಾಮ ಪಂಥ, ಜನಪದ ದೈವಗಳ ಕುಲ ಕಸುಬುಗಳು,  ಪೂರ್ಣಗೊಳಿಸಿದ ವಿಭಾಗದ ಯೋಜನೆಗಳು. ಮೈಲಾರಲಿಂಗನ ಕಾವ್ಯ, ಬಾಲನಾಗಮ್ಮನ ಕಾವ್ಯ, ಬಲಿ ಚಕ್ರವರ್ತಿ, ಮೈಲಾರಲಿಂಗ ಸಂಪ್ರಾದಾಯದ ಪದಕೋಶ, ಕಾವ್ಯಗಳ ಮುಖೇನ ಮೈಲಾರಲಿಂಗ ಇವರು ವೈಯಕ್ತಿಕವಾಗಿ ಪೂರ್ಣಗೊಳಿಸಿದ ಯೋಜನೆಗಳು. ಜನಪದ ಸಂಸ್ಕ್ರತಿ, ಡಾ ಹಾ. ಮಾ. ನಾಯಕ, ಜನಪದ ನಂಬಿಕೆಗಳು, ಮಾತಂಗಿ, ಸುಳಿ, ಆದಿವಾಸಿ, ಕನ್ನಡ ಜನಪದ ನಂಬಿಕೆಗಳು ಇವರು ಬರೆದ ಪುಸ್ತಕಗಳು. ವಿಜಯನಗರ ಸಾಂಸ್ಕ್ರತಿಕ ಆಯಾಮಗಳು, ಮೈಲಾರಲಿಂಗನ ಕಾವ್ಯ, ವ್ಯಾದ ಚರಿತೆ, ವಾಲ್ಮೀಕಿ ಸಮುದಾಯ ಮಂಜುನಾಥ ಅವರು ಸಂಪಾದಿಸಿದ ಕೃತಿಗಳು.  ಹೆಣ್ಣು ನಾಡಿನಲ್ಲಿ, ಬುಡಬುಡಿಕೆಯವರು, ಜನ ಜಾನಪದ, ಮಿಜೋ ಬುಡಕಟ್ಟುಗಳು, ಪ್ರಕೃತಿ ಮತ್ತು ಒಗಟು ಪ್ರಕಟಿತ ಲೇಖನಗಳು. ಜನಪದ ನಂಬಿಕೆ ಮತ್ತು ಸಾಹಿತ್ಯ, ಜನಪದ ದೈವಗಳ ನೆಲೆಗಳು, ಮಾಟ-ಮಂತ್ರ-ಮೋಡಿ : ವಿಜ್ಞಾನ, ಹೊಸೂರಮ್ಮನ ಒಂದು ಪರಿಚಯ, ರೊಟ್ಟಿ ಸಂಕಥನ, ದೇಸೀ ಚಿಂತನೆ ಮತ್ತು ಚರಿತ್ರೆ ರಾಜ್ಯಮಟ್ಟದ ವಿಚಾರ ಸಂಕಿರಣ, ಸಮ್ಮೇಳನ, ಶಿಬಿರ, ಕಾರ್ಯಗಾರಗಳಲ್ಲಿ ಇವರು ಮಂಡಿಸಿದ ಪ್ರಬಂಧಗಳು. 

ಮಂಜುನಾಥ ಬೇವಿನಕಟ್ಟಿ

(01 Jun 1962)