ವ್ಯಾಧ ಚರಿತೆ : ಬೇಡ ಕುಲಮೂಲದ ಕಥನಗಳು

Author : ಮಂಜುನಾಥ ಬೇವಿನಕಟ್ಟಿ

Pages 238

₹ 80.00




Year of Publication: 2007
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ.

Synopsys

ಈ ಕೃತಿ ಬೇಡ ಸಮುದಾಯವನ್ನು ಕುರಿತು ಬಹುನೆಲೆಗಳಲ್ಲಿ ವ್ಯಾಪಕ ಅಧ್ಯಯನ ನಡೆಸಿರುವ 31 ಲೇಖನಗಳ ಸಂಕಲನವಾಗಿದ್ದು ವೇದಪೂರ್ವ ಕಾಲದಿಂದ ಸಮಕಾಲೀನ ಸಂದರ್ಭದವರೆಗೆ ಬೇಡ ಜನಾಂಗವನ್ನು ಕುರಿತು ನಡೆಸಿದ ವ್ಯಾಪಕ ಕ್ಷೇತ್ರಕಾರ್ಯ ಮತ್ತು ಅಧ್ಯಯನದ ಫಲವಾಗಿ ಸಂಗ್ರಹಿತಗೊಂಡ ಅಮೂಲ್ಯ ಮಾಹಿತಿಗಳು ಇಲ್ಲಿ ಒಟ್ಟು ಸೇರಿವೆ. ಬೇಡ ಜನಾಂಗದ ಭಿನ್ನ ನೆಲೆಗಳು, ಸಾಂಸ್ಕೃತಿಕ ವೈವಿಧ್ಯಗಳು, ಪ್ರಾದೇಶಿಕ ಭಿನ್ನತೆಗಳು ಸಾಂಸ್ಕೃತಿಕ ವಿವರಗಳು ಇಲ್ಲಿ ಚರ್ಚಿತವಾಗಿವೆ. ಈ ಕೃತಿಯು ಒಳಗೊಂಡಿರುವ ಆಧ್ಯಾಯಗಳೆಂದರೆ:ವೇದಪೂರ್ವ ಭಾರತದ ಬೇಡ ಮೂಲನಿವಾಸಿಗಳು , ಬೇಡ ಜನಾಂಗದ ನಿಜ ನಿಷ್ಪತ್ತಿ , ಕರ್ನಾಟಕದ ಬೇಡ ಜನಾಂಗ ಉಗಮ, ವಿಕಾಸ, ವರ್ತಮಾನದ ಬದುಕು ,ಕರ್ನಾಟಕದ ಬೇಡ ನಾಯಕರು; ನಾಯಕ ಜನಾಂಗ ಪರಂಪರೆ ,ಬೇಡ ನಾಯಕರ ಬೆಡಗುಗಳ ಪ್ರಾಚೀನತೆ , ಕನ್ನಡ ಶಾಸನಗಳಲ್ಲಿ ಬೇಡ ಜನಾಂಗ , ಮಾಸ ಬೇಡ, ಕಂಪಣ ಬೇಡ ಸಂಸ್ಕೃತಿ , ದುರುಗ ಮುರುಗಿ ಕಥನ , ಉಪಪಂಗಡ ಮೊಂಡರು, ಪರಿವಾರದವರ ಹಿನ್ನೆಲೆ ಮೂಲ , ಕೇರಳದ ಚೇರರು, ನಾಯರರು ಮತ್ತು ಕರ್ನಾಟಕದ ನಾಯಕರು.

About the Author

ಮಂಜುನಾಥ ಬೇವಿನಕಟ್ಟಿ
(01 June 1962)

ಡಾ. ಮಂಜುನಾಥ ಬೇವಿನಕಟ್ಟಿ ಅವರು 1962  ಜೂನ್ 1 ರಂದು ಜನಿಸಿದರು. ಎಂ. ಎ. (ಜಾನಪದ) ಎಂ.ಎ. ( ಮನಃಶಾಸ್ತ್ರ ) ಪಿಎಚ್.ಡಿ ( ಜಾನಪದ ) ಪದವಿ ಪಡೆದ ಇವರು ಜಾನಪದ ಅಧ್ಯಯನ ವಿಭಾಗ ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜನಪದ ಆಚರಣೆಗಳು ಮತ್ತು ನಂಬಿಕೆಗಳು,  ಮನೋವಿಜ್ಞಾನ : ಜನಪದ ಆಚರಣೆಗಳು ಮತ್ತು ದೈವಗಳು , ಮಹಿಳಾ ಅಧ್ಯಯನ ನೆಲೆಯಲ್ಲಿ ಜನಪದ ಆಚರಣೆ ಮತ್ತು ನಂಬಿಕೆಗಳು. ಗ್ರಾಮ ಅಧ್ಯಯನ ಇವರ ಆಸಕ್ತಿಯ ಅಧ್ಯಯನ ಕ್ಷೇತ್ರಗಳಾಗಿವೆ. ಕರ್ನಾಟಕ ಜನಪದ ದೈವಗಳು ವಿಶ್ವಕೋಶ, ಕರ್ನಾಟಕ ಜನಪದ ...

READ MORE

Related Books