About the Author

ಮನು ದೇವದೇವನ್‌ ಅವರು ಮಂಡಿಯ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಸಂಸ್ಥೆಯ ಮಾನವಿಕ ಹಾಗೂ ಸಮಾಜ ವಿಜ್ಞಾನಗಳ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.  ಮನು ದೇವದೇವನ್‌ ಅವರು ದಕ್ಷಿಣ ಭಾರತದ ಆಧುನಿಕ ಪೂರ್ವ ಇತಿಹಾಸಕ್ಕೆ ಸಂಬಂಧಿಸಿದಂತೆ ಅನನ್ಯ ಹಾಗೂ ವ್ಯಾಪಕ ಕೊಡುಗೆ ನೀಡಿದ್ದಾರೆ. ಅವರ ’A Pre-History of Hinduism’ ಕೃತಿಯು ಭಾರತದ ಸಾಂಸ್ಕೃತಿಕ ಇತಿಹಾಸ ಅಧ್ಯಯನ ಕ್ಷೇತದಲ್ಲಿ ವಿಭಿನ್ನ ನೋಟ ಹಾಗೂ ಆಲೋಚನಾ ಕ್ರಮದಿಂದ ವಿಶಿಷ್ಟ ಸ್ಥಾನ ಪಡೆದಿದೆ. ಹಲವು ಭಾಷೆಗಳ ಆಕರಗಳನ್ನು ಬಳಸಿ ತಮ್ಮ ಅಪೂರ್ವ ಒಳನೋಟವನ್ನು ಕಟ್ಟಿಕೊಡುವ ಕಾರಣಕ್ಕಾಗಿ ಅವರು ಪರಿಚಿತರಾಗಿದ್ದಾರೆ. ಪೃಥ್ವಿಯಲ್ಲೊದಗಿದ ಘಟವು…ಅವರ ಪ್ರಕಟಿತ ಕನ್ನಡ ಕೃತಿ.

ಇನ್ಫೋಸಿಸ್ ಸಂಸ್ಥೆಯು ನೀಡುವ ಮಾನವಿಕ ವಿಭಾಗದ 2019ನೇ ಸಾಲಿನ ಪುರಸ್ಕಾರಕ್ಕೆ ಇತಿಹಾಸಕಾರ, ಸಂಶೋಧಕ ಮನು ವಿ. ದೇವದೇವನ್‌ ಅವರಿಗೆ ಸಂದಿದೆ. ಒಂದು ಲಕ್ಷ ಅಮೆರಿಕನ್‌ ಡಾಲರ್‌ (70 ಲಕ್ಷ ರೂಪಾಯಿ) ಮೊತ್ತದ ಪ್ರಶಸ್ತಿಯನ್ನು ಸಂಶೋಧನಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ನೀಡಲಾಗುತ್ತದೆ. 

 

ಮನು ವಿ. ದೇವದೇವನ್