ಪೃಥ್ವಿಯಲ್ಲೊದಗಿದ ಘಟವು…

Author : ಮನು ವಿ. ದೇವದೇವನ್

Pages 172

₹ 115.00




Year of Publication: 2009
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

ಒಂದೂವರೆ ಸಾವಿರಕ್ಕೂ ಹೆಚ್ಚು ವರ್ಷಗಳಲ್ಲಿ ಹರಡಿಕೊಂಡಿರುವ ಕರ್ನಾಟಕದ ನಿನ್ನೆಗಳನ್ನು ಈ ಪುಸ್ತಕವು ಸುಮಾರು ನೂರೈವತ್ತು ಪುಟಗಳಲ್ಲಿ ನಮ್ಮ ಅವಲೋಕನಕ್ಕಾಗಿ ಜೋಡಿಸಿಡುತ್ತದೆ. ಜೊತೆಗೆ, ಇತಿಹಾಸವೆಂದರೆ ಅದು ರಾಜಮಹಾರಾಜರನ್ನೂ ಅನ್ಯಕ್ಷೇತ್ರಗಳ ನಾಯಕಮಣಿಗಳನ್ನೂ ಹೆಣೆದು ಕಟ್ಟಿದ ಘಟನಾವಳಿಗಳ ಒಂದು ಮಾಲೆಯೆಂಬಂತೆ ನೋಡದೆ, ಬದಲು, ಅದು ಹಲವು ಭೌತಿಕ ಮತ್ತು ಮಾನಸಿಕ ಒತ್ತಡಗಳಿಂದ ಚಲನಶೀಲವಾಗಿ ರೂಪುಗೊಳ್ಳುತ್ತ ಬಂದ ಒಂದು ಪ್ರಕ್ರಿಯೆ- ಎಂದು ಗ್ರಹಿಸುವ ಹೊಸದೊಂದು ಪ್ರಯೋಗ ಈ ಬರಹದಲ್ಲಿದೆ. ‘ಗತಿಸಿಹೋದ ಕಾಲಗಳ ಬಗ್ಗೆ ಕ್ರಿಯಾತ್ಮಕವಾದ ಹೊಸ ಪ್ರಶ್ನೆಗಳನ್ನು ಕೇಳುತ್ತಾ ಅಧ್ಯಯನದ ಹೊಸ ವಿಧಾನಗಳನ್ನು ದುಡಿಸಿಕೊಂದು ನಿರಂತರವಾಗಿ ಪುನರ್‌ವಿಚಾರಣೆ ನಡೆಸುವುದೇ ಇತಿಹಾಸಕಾರರ ಕೃಷಿ’ ಎಂಬ ಘೋಷವಾಕ್ಯದೊಂದಿಗೆ ಆರಂಭವಾಗುವ ಈ ಪುಸ್ತಕವು ನಾಲ್ಕು ಭಾಗಗಳಲ್ಲಿ ಆದಿಮ ಕಾಲದಿಂದ ಆಧುನಿಕತಿಯ ಆರಂಭದವರೆಗಿನ ಕನ್ನಡ ನಾಡಿನ ಚಲನಶೀಲ ಕಥನವೊಂದನ್ನು ಕಟ್ಟಿದೆ. ಈ ಹೊಸ ಕಟ್ಟಡದಲ್ಲಿ ನಾವು ಪರಿಚಿತವೆಂದು ತಿಳಿದಿರುವ ಧರ್ಮಸಂಪ್ರದಾಯಗಳೂ ಕಾವ್ಯಶಾಸ್ತ್ರಗಳೂ ರಾಜಕೀಯ ಮತ್ತು ರಾಜಕೀಯೇತರ ವಿದ್ಯಮಾನಗಳೂ ಬೇರೆಯೇ ಆದೊಂದು ಬೆಳಕಿನಲ್ಲಿ ಕಾಣತೊಡುವುದು ಈ ಬರವಣಿಗೆಯ ವಿಶೇಷ. ಕನ್ನಡವು ಶಾಸ್ತ್ರೀಯತೆಯ ಕಿರೀಟ ಹೊತ್ತುಕೊಂಡಿರುವ ಬೆನ್ನಿನಲ್ಲೇ ಈ ಪುಸ್ತಕ ಪ್ರಕಟವಾಗಿತ್ತಿರುವುದು ಕಾಕತಾಳೀಯವಾದರೂ ಸಮಯೋಚಿತ.

About the Author

ಮನು ವಿ. ದೇವದೇವನ್

ಮನು ದೇವದೇವನ್‌ ಅವರು ಮಂಡಿಯ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಸಂಸ್ಥೆಯ ಮಾನವಿಕ ಹಾಗೂ ಸಮಾಜ ವಿಜ್ಞಾನಗಳ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.  ಮನು ದೇವದೇವನ್‌ ಅವರು ದಕ್ಷಿಣ ಭಾರತದ ಆಧುನಿಕ ಪೂರ್ವ ಇತಿಹಾಸಕ್ಕೆ ಸಂಬಂಧಿಸಿದಂತೆ ಅನನ್ಯ ಹಾಗೂ ವ್ಯಾಪಕ ಕೊಡುಗೆ ನೀಡಿದ್ದಾರೆ. ಅವರ ’A Pre-History of Hinduism’ ಕೃತಿಯು ಭಾರತದ ಸಾಂಸ್ಕೃತಿಕ ಇತಿಹಾಸ ಅಧ್ಯಯನ ಕ್ಷೇತದಲ್ಲಿ ವಿಭಿನ್ನ ನೋಟ ಹಾಗೂ ಆಲೋಚನಾ ಕ್ರಮದಿಂದ ವಿಶಿಷ್ಟ ಸ್ಥಾನ ಪಡೆದಿದೆ. ಹಲವು ಭಾಷೆಗಳ ಆಕರಗಳನ್ನು ಬಳಸಿ ತಮ್ಮ ಅಪೂರ್ವ ಒಳನೋಟವನ್ನು ಕಟ್ಟಿಕೊಡುವ ಕಾರಣಕ್ಕಾಗಿ ಅವರು ಪರಿಚಿತರಾಗಿದ್ದಾರೆ. ಪೃಥ್ವಿಯಲ್ಲೊದಗಿದ ಘಟವು…ಅವರ ...

READ MORE

Related Books