About the Author

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ತಲಕಾಲುಕೊಪ್ಪ ಗ್ರಾಮದ ಅಡಿಕೆ ಕೃಷಿ ಕುಟುಂಬದ ಹಿನ್ನೆಲೆ. ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಿಂದ ತಳಿ ಅಭಿವೃದ್ಧಿಶಾಸ್ತ್ರದಲ್ಲಿ ಪಿ.ಹೆಚ್ ಡಿ. ಅಶೋಕ ಪರಿಸರ ಸಂಶೋಧನಾ ಕೇಂದ್ರ, ಬೆಂಗಳೂರಿನಲ್ಲಿ ಭಾರತೀಯ ಸಸ್ಯಮಾಹಿತಿ ಗಣಕೀಕರಣದ ಸಮನ್ವಯಕಾರ. ಅಮೇರಿಕಾದ ಮಿಸ್ಸೋರಿ ಸಸ್ಯೋದ್ಯಾನದಲ್ಲಿ ಸಂಶೋಧನಾ ಸಂದರ್ಶಕ. ಕೊಡಗಿನ ಪೊನ್ನಂಪೇಟೆಯ ಭತ್ತ ಸಂಶೋಧನಾ ಕೇಂದ್ರ ಮತ್ತು ಅರಣ್ಯ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕ. ಪಶ್ಚಿಮಘಟ್ಟ ಪ್ರದೇಶದ ಮುನ್ನೂರಕ್ಕೂ ಮಿಕ್ಕಿ ಭತ್ತದ ತಳಿಗಳ ದಾಖಲಾತಿ. 100ಕ್ಕೂ ಹೆಚ್ಚು ಸಂಶೋಧನಾ ಪ್ರಕಟಣೆಗಳು. ಪ್ರಸ್ತುತ ಆರು ವರ್ಷಗಳಿಂದ ಪುತ್ತೂರಿನ ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರದಲ್ಲಿ ಹಿರಿಯ ವಿಜ್ಞಾನಿ. ೨೦೧೩ರಿಂದ ಅಡಿಕೆ ಪತ್ರಿಕೆಯ ‘ಜಾಲ ಜಗತ್ತು’ ಅಂಕಣದ ಬರಹಗಾರ. ಅನನ್ಯ ಕೃಷಿ ಮಾಹಿತಿಯ ಜಾಲತಾಣ’ ಕೃಷಿಕನ್ನಡ’ ದ ರೂವಾರಿ. ಕೃಷಿಕರ ಲೆಕ್ಕಾಚಾರಕ್ಕೆ ಅನುವಾಗುವ ‘Farmoney’ ಆ್ಯಂಡ್ರಾಯ್ಡ್ ಆ್ಯಪಿನ ಸೂತ್ರಧಾರಿ.

ಮೋಹನ್ ತಲಕಾಲುಕೊಪ್ಪ

(15 Jul 1972)