ಕೃಷಿಗುಚ್ಛ

Author : ಮೋಹನ್ ತಲಕಾಲುಕೊಪ್ಪ

Pages 95

₹ 0.00




Year of Publication: 2018
Published by: ಅಖಿಲ ಹವ್ಯಕ ಸಭಾ
Address: ಹವ್ಯಕ ಅಧ್ಯಯನ ಕೇಂದ್ರ, 101/ಎ,11ನೇ ಅಡ್ಡರಸ್ತೆ, 8ನೇ ಮುಖ್ಯರಸ್ತೆ, ಮಲ್ಲೇಶ್ವರಂ, ಬೆಂಗಳೂರು
Phone: 0802334819

Synopsys

"ಕೃಷಿಗುಚ್ಛ" ದಲ್ಲಿ ಕೃಷಿ ಬರಹಗಳು, ಕೃಷಿ ವೈಚಾರಿಕ ಬರಹಗಳು ಹಾಗೂ ಕೃಷಿಯಲ್ಲಿ ಮಾಹಿತಿ ತಂತ್ರಜ್ಞಾನದ ಬಳಕೆಯ ಬಗ್ಗೆ ವೈವಿಧ್ಯಮಯ ಲೇಖನಗಳಿವೆ. ೬೭ರ ಹರೆಯದ ಶ್ರೀಪಾದರಾವ್ ಎಂಬ ಕೃಷಿಕರ ಸಾಧನೆ, ಸಮೃದ್ಧಿ - ಪ್ಲಾಂಟ್ ಫ್ರೆಂಡ್ ಶಿಪ್ ಗುಂಪು, ನೆಲದೊಡಲ ಚಿಗುರು ಎಂಬ ಪುಸ್ತಕದ ಪರಿಚಯ, ಅಪ್ಪೆಮಿಡಿ, ಸಾವಯವ ದೃಢೀಕರಣ, ಕಾಳುಮೆಣಸಿನ ಶೀಘ್ರ ಸಸ್ಯೋತ್ಪಾದನೆ, ಹಲಸಿನ ಕಾಫಿ 'ಜಾಫಿ', ಸಿರಿಧಾನ್ಯಗಳ ಬಳಕೆಯ ಬಗ್ಗೆ ಜಿಜ್ಞಾಸೆ, ಕೃಷಿಯಲ್ಲಿ ಯುವಕರ ಉಪಸ್ಥಿತಿ, ಕೃಷಿಕನ ಕಣ್ಣಲ್ಲಿ ಬೆಂಗಳೂರೆಂಬ ಮಾಯಾನಗರಿ, ಪತ್ರಿಕೋದ್ಯಮದಲ್ಲಿ ಮೊಬೈಲ್ ಬಳಕೆ, ಹಲವಾರು ಕೃಷಿಸ್ನೇಹಿ ಜಾಲತಾಣಗಳು ಹಾಗೂ ಕೃತಕ ಬುದ್ಧಿಮತ್ತೆಯ ಆಪ್ಸ್, ಕೃಷಿಯಲ್ಲಿ ಡ್ರೋನ್ ಬಳಕೆ- ಇವು ಇಲ್ಲಿರುವ ಕೆಲವು ಲೇಖನಗಳು.

About the Author

ಮೋಹನ್ ತಲಕಾಲುಕೊಪ್ಪ
(15 July 1972)

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ತಲಕಾಲುಕೊಪ್ಪ ಗ್ರಾಮದ ಅಡಿಕೆ ಕೃಷಿ ಕುಟುಂಬದ ಹಿನ್ನೆಲೆ. ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಿಂದ ತಳಿ ಅಭಿವೃದ್ಧಿಶಾಸ್ತ್ರದಲ್ಲಿ ಪಿ.ಹೆಚ್ ಡಿ. ಅಶೋಕ ಪರಿಸರ ಸಂಶೋಧನಾ ಕೇಂದ್ರ, ಬೆಂಗಳೂರಿನಲ್ಲಿ ಭಾರತೀಯ ಸಸ್ಯಮಾಹಿತಿ ಗಣಕೀಕರಣದ ಸಮನ್ವಯಕಾರ. ಅಮೇರಿಕಾದ ಮಿಸ್ಸೋರಿ ಸಸ್ಯೋದ್ಯಾನದಲ್ಲಿ ಸಂಶೋಧನಾ ಸಂದರ್ಶಕ. ಕೊಡಗಿನ ಪೊನ್ನಂಪೇಟೆಯ ಭತ್ತ ಸಂಶೋಧನಾ ಕೇಂದ್ರ ಮತ್ತು ಅರಣ್ಯ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕ. ಪಶ್ಚಿಮಘಟ್ಟ ಪ್ರದೇಶದ ಮುನ್ನೂರಕ್ಕೂ ಮಿಕ್ಕಿ ಭತ್ತದ ತಳಿಗಳ ದಾಖಲಾತಿ. 100ಕ್ಕೂ ಹೆಚ್ಚು ಸಂಶೋಧನಾ ಪ್ರಕಟಣೆಗಳು. ಪ್ರಸ್ತುತ ಆರು ವರ್ಷಗಳಿಂದ ಪುತ್ತೂರಿನ ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರದಲ್ಲಿ ಹಿರಿಯ ವಿಜ್ಞಾನಿ. ...

READ MORE

Related Books