About the Author

ಅವಿಭಜಿತ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಚಿಗಟೇರಿ ಗ್ರಾಮದವರು.ತಂದೆ ಕೊಟ್ರಬಸಪ್ಪ. ದೊಡ್ಡ ಜಮೀನುದಾರರು. ರಾಷ್ಟ್ರೀಯವಾದಿ. ಮದನಪಲ್ಲಿಯ ಥಿಯಾಸಫಿ ಕಾಲೇಜಿನಲ್ಲಿ ಓದು ಆರಂಭವಾಗಿ, ತೆಲುಗು ಕಲಿಯಲು ಅವಕಾಶ ಸಿಕ್ಕಿತ್ತು.ಮಹರ್ಷಿ ಆರವಿಂದರ ತತ್ವಗಳೆಡೆಗೆ ಒಲವು ಬೆಳೆಸಿಕೊಂಡಿದ್ದು ಬ್ರಹ್ಮಚಾರಿಯಾಗೇ ಉಳಿಯಲು ನಿಧರಿಸಿದ್ದು, ತಂದೆಯ ಒತ್ತಾಯದ ಮೇರೆಗೆ ಮದುವೆಯಾದರು. ಮುಂದೆ ತಂಬಾಕಿನ ವ್ಯಾಪಾರದಿಂದ ನಿಪ್ಪಾಣಿಯ ಸಂಪರ್ಕ ಬಂದು ಮರಾಠಿಯೂ ಕಲಿತರು. ಚಿಗಟೇರಿ ಗ್ರಾ.ಪಂ. ಅಧ್ಯಕ್ಷರೂ ಆಗಿದ್ದರು. ತಾಲೂಕು ಮಂಡಳಿ ಸದಸ್ಯರೂ ಆಗಿದ್ದರು. ವಿಧಾನಸಭೆಗೆ ಸ್ಪರ್ಧಿಸಿ ( 1962) ಸೋತರು. ಜಾನಪದ ಸಾಹಿತ್ಯದತ್ತ ಒಲವು ಬೆಳೆಯುತ್ತಾ ಹೋಗಿ, ಕರ್ನಾಟಕ ಜಾನಪದ ಹಾಗೂ ಯಕ್ಷಗಾನ ಅಕಾಡೆಮಿ ಸದಸ್ಯರೂ ಆಗಿದ್ದರು. 

ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ (ಹಡಗಲಿಯಲ್ಲಿ-1984) ಅಧ್ಯಕ್ಷರಾಗಿದ್ದರು. ದಾವಣಗೆರಿ ಜಿಲ್ಲಾ ಕನ್ನಡ ಸಾಹಿತ್ಯ (ಕಾರಿಗನೂರಿನಲ್ಲಿ- 2006) ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು. ಕರ್ನಾಟಕ ನಾಟಕ ಅಕಾಡೆಮಿ ಫೆಲೋಷಿಪ್ ದೊರಕಿತ್ತು. ಕರ್ನಾಟಕ ಜಾನಪದ ಅಕಾಡೆಮಿಯ ಜಾನಪದ ತಜ್ಞ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕನಾಟಕ ಸರ್ಕಾರದ ಏಕೀಕರಣ ಪ್ರಶಸ್ತಿ ಹೀಗೆ ಹಲವು ಪ್ರಶಸ್ತಿಗಳು ಲಭಿಸಿವೆ. 

ಕೃತಿಗಳು: ಆ ಅಜ್ಜ ಈ ಮೊಮ್ಮಗ (ಕವನ ಸಂಕಲನ), ನಾಟಕಗಳು: ಚೌತಿ ಚಂದ್ರ, ಬಂಗಾರ ತಟ್ಟೆ, ಜನ ಅರಣ್ಯ, ಮೋಚಿಮಾವ, ಅಂಗುಲಿಮೂಲ, ಸೂಳೆ ಸಂಕವ್ವ, ಶೀಲಾವತಿ ಹಾಗೂ ಬಾಳ ಭಿಕ್ಷುಕ. ಜಾನಪದ ಸಾಹಿತ್ಯ: ನವಲ ಕುಣದಾವ, ಜನಪದ ಮುಕ್ತಕಗಳು, ಚಿತ್ರಪಟ ರಾಮಾಯಣ, ಗೊಂಬಿಗೌಡರ ಸೂತ್ರದ ಗೊಂಬೆ ಆಟಗಳು, ಲಕ್ಷಾಪತಿ ರಾಜನ ಕಥೆ, ಗೊಂದಲಿಗರ ದೇವೇಂದ್ರಪ್ಪನ ಆಟಗಳು, ಅನುವಾದ: ಭಾರತದ ಪ್ರೇಮಕಥೆಗಳು, ವೊಕಾಹಿಸಿ, ಏಕದಾ ನಿಶಾಧ್ ಶಾಲೆ.

ಮುದೇನೂರು ಸಂಗಣ್ಣ