About the Author

ಮುಖ್ಯಮಂತ್ರಿ ಚಂದ್ರು ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ  ಮಾಜಿ ಅಧ್ಯಕ್ಷರು. ಹಂಪಿಯ ಕನ್ನಡ ವಿ.ವಿ, ಕುಲಪತಿ ಡಾ. ಎ. ಮುರಿಗೆಪ್ಪ ಅವರೊಂದಿಗೆ ಮುಖ್ಯಮಂತ್ರಿ ಚಂದ್ರು ಅವರು ‘ಆಡಳಿತ ಕನ್ನಡ ಎಂಬ ಸಂಪುಟ ರಚಿಸಿದ್ದಾರೆ. 

ಇವರು ಮೂಲತಃ ಬೆಂಗಳೂರು ಬಳಿಯ ನೆಲಮಂಗಲ ತಾಲೂಕಿನ ಹೊನ್ನಸಂದ್ರದವರು.  ಹುಟ್ಟಿದ್ದು 1953ರ ಆ. 28 ರಂದು. ತಂದೆ ಎನ್.ನರಸಿಂಹಯ್ಯ,ತಾಯಿ ತಿಮ್ಮಮ್ಮ.. ಚಂದ್ರು ಮೂಲ ಹೆಸರು ಚಂದ್ರಶೇಖರ್.ತುಮಕೂರಿನ ಸಿದ್ಧಗಂಗಾ ಮಠದ ಶಾಲೆಯಲ್ಲಿ ವಿದ್ಯಾಭ್ಯಾಸ ಹಾಗೂ ಬಿ.ಎಸ್.ಸಿ ಪೂರ್ಣಗೊಳಿಸಿದರು. 

ಬೆಂಗಳೂರು ವಿ.ವಿ. ಉದ್ಯೋಗಯಾಗಿದ್ದರು. ಹುತ್ತವ ಬಡಿದರೆ ನಾಟಕದ ಪಾತ್ರಧಾರಿ ಬರಲಿಲ್ಲದ ಕಾರಣ ನಿರ್ದೇಶಕ ಪ್ರಸನ್ನ ಅವರು ಮುಖ್ಯಮಂತ್ರಿ ಚಂದ್ರುವಿಗೆ ಅವಕಾಶ ನೀಡಿದ್ದು, ಅಭಿನಯ ಕ್ಷೇತ್ರಕ್ಕೆ ಪ್ರವೇಶಿಸಲು ಕಾರಣವಾಯಿತು. ಪ್ರಸನ್ನ ನಿರ್ದೇಶನ ಮುಖ್ಯಮಂತ್ರಿ ನಾಟಕದಲ್ಲಿ ಮುಖ್ಯಮಂತ್ರಿ ಪಾತ್ರ ಮಾಡಿದ್ದು, ಅದರ ಖ್ಯಾತಿಯು ಅವರ ಹೆಸರಿನೊಂದಿಗೆ ಶಾಶ್ವತವಾಗಿ ಅಂಟಿಕೊಂಡಿತು. 

ನಾಟಕ-ನಿರ್ದೇಶನ: ಮೋಡಗಳು, ಮೂಕಿ-ಟಾಕಿ, ಎಲ್ಲಾರೂ ಮಾಡುವುದು, ಗರ್ಭಗುಡಿ, ಕತ್ತಲೆ ದಾರಿ ದೂರ, ಭರತಪ್ಪನ ಸೊಂಟಕ್ಕೆ ಗಂಟೆ, ಕೇಳು ಜನಮೇಜಯ, ಕಂಬಳಿ ಸೇವೆ (ಹಾಸ್ಯ ನಾಟಕ), ಹೋಂ ರೂಲು. ಕನ್ನಡ ಸಿನಿಮಾಗಳಲ್ಲಿ,ಹಾಸ್ಯ,ಖಳ,ಪೋಷಕ ನಟ..- ಹೀಗೆ ಹಲಬಗೆಯ ಪಾತ್ರ್ಗಗಳನ್ನು ಅಭಿನಯಿಸಿದ್ದಾರೆ. ಕಿರುತೆರೆ ಚಲನಚಿತ್ರಗಳಲ್ಲೂ ಅಭಿನಯಿಸುತ್ತಿದ್ದಾರೆ. 

ಪ್ರಶಸ್ತಿ-ಗೌರವಗಳು: ರಾಜ್ಯ ನಾಟಕ ಸ್ಪರ್ಧೆಯಲ್ಲಿ ಉತ್ತಮ ನಿರ್ದೇಶನಕ್ಕೆ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಗುಲ್ಬರ್ಗಾ ವಿಶ್ವವಿದ್ಯಾಲಯವು ಡಾಕ್ಟರೇಟ್ ಗೌರವವನ್ನು ಪ್ರಧಾನಿಸಿದೆ. 

ಗೌರಿಬಿದನೂರು ವಿಧಾನಸಭಾ ಕ್ಷೇತ್ರದಿಂದ ಒಮ್ಮೆ ಗೆಲುವು ಸಾಧಿಸಿದ್ದರು. ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. 

ಮುಖ್ಯಮಂತ್ರಿ ಚಂದ್ರು

(28 Aug 1953)