ಮುಖ್ಯಮಂತ್ರಿ ಚಂದ್ರು ಅವರ ರಂಗಭೂಮಿ, ಹಿರಿತೆರೆ, ಕಿರುತೆರೆ, ರಾಜಕಾರಣ ಬದುಕಿನ ಚಿತ್ರಣ ರಂಗವನದ 'ಚಂದ್ರ'ತಾರೆ. ಕೃತಿಯ ಬೆನ್ನುಡಿಯಲ್ಲಿ ಬಿ.ವಿ. ರಾಜಾರಂ ಅವರ ಮಾತುಗಳಿದ್ದು, 'ಮುಖ್ಯಮಂತ್ರಿ' ನಾಟಕದ 800ಕ್ಕೂ ಅಧಿಕ ಪ್ರದರ್ಶನಗಳ ಜೊತೆಗೆ ಕಲಾಗಂಗೋತ್ರಿ ತಂಡ ಹಾಗೂ ಎಲ್ಲ ಗೆಳೆಯರೊಂದಿಗೆ ಖುಷಿಯಾಗಿ 70 ವರ್ಷಗಳನ್ನು ಕೂಡಿಸಿಕೊಂಡಿದ್ದಾರೆ. ಆರೋಗ್ಯದ ಏರಿಳಿತ, ಅಡಿಗಡಿಗೂ ಬಂದ ಅಡೆತಡೆಗಳಿಗೆ ಮನಸ್ಸು ಕೆಡಿಸಿಕೊಳ್ಳದೆ, ನಗುನಗುತ್ತಲೆ ಜೀವನದ ದೋಣಿಯಲ್ಲಿ ಪಯಣಿಸಿದ್ದಾರೆ. ಸರಳ ಜೀವನ, ಹಾಸ್ಯಬೆರೆತ ಮಾತು, ಎಲ್ಲ ಕ್ಷೇತ್ರಗಳಲ್ಲೂ ನಿರಂತರ ಒಡನಾಟ... ಹೀಗೆ ಹೊನ್ನಸಂದ್ರ ನರಸಿಂಹಯ್ಯ ಚಂದ್ರಶೇಖರ ಅದೃಷ್ಟದ ರೇಖೆಯೊಡನೆ ನಡೆದು ಭವಿಷ್ಯಕ್ಕೆ ಜಿಗಿದು ಡಾ.ಮುಖ್ಯಮಂತ್ರಿ ಚಂದ್ರು ಆದರು. ಈ ಕೃತಿ ಅವರ ಜೀವನ ಪಯಣದ ಯೋಗ-ಯೋಗ್ಯತೆಯ, ಸಾಧನೆ-ಸಿದ್ಧಿಯನ್ನು ಅವರದೇ ಹಾಸ್ಯಮಿಶ್ರಿತ ಭಾಷೆಯಲ್ಲಿ ಕಂಡಿರಿಸಿದ್ದಾರೆ ಎಂಬುದಾಗಿ ಹೇಳಿದ್ದಾರೆ.
©2025 Book Brahma Private Limited.