About the Author

ಮುಳಿಯ ರಾಘವಯ್ಯ ಮೂಲತಃ ಮಂಗಳೂರಿನವರು. ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರಾಗಿ ಭಾರತ ಸರ್ಕಾರದ ಭಾಭಾ ಪರಮಾಣು ಸಂಶೋಧನ ಕೇಂದ್ರದಲ್ಲಿ ನಾಲ್ವತ್ತು ವರ್ಷ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ತರಗತಿಗಳಿಗೆ - ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿದ್ದಾರೆ. ಅವರ ವೈಜ್ಞಾನಿಕ ಪ್ರಬಂಧಗಳು ರಾಷ್ಟ್ರೀಯ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಕಟವಾಗಿವೆ. ಪರಮಾಣು ವಿಜ್ಞಾನವನ್ನು ಅರ್ಥವಾಗುವಂತೆ ಸರಳವಾದ ಭಾಷೆಯ ಮೂಲಕ ವಿಜ್ಞಾನ ಲೇಖನಗಳನ್ನು ರಚಿಸಿದ್ದಾರೆ. `ವಿಕಿರಣ ಪರಿಣಾಮ, ಪರಮಾಣು ಶಕ್ತಿ ಮತ್ತು ತುಲನಾತ್ಮಕ ವಿಪತ್ತುಗಳು' ಪುಸ್ತಕಗಳ ಸಹ ಲೇಖಕರಾಗಿದ್ದಾರೆ. ‘ಸಿರಿಗೆರಳು', 'ನೂರೈದರ ಧೀಮಂತ ಬಾಪು ರಾಮಣ್ಣ', 'ಚಿರಸ್ಕರಣೆ' ಇವು ಇವರು ಸಂಪಾದಿಸಿದ ಹೊತ್ತಗೆಗಳು. 'ನಾಡೋಜ ಮುಳಿಯ ತಿಮ್ಮಪ್ಪಯ್ಯ', ‘ಮುಳಿಯ ಮಹಾಬಲ ಭಟ್ಟರು’ ಕೃತಿಗಳನ್ನು ರಚಿಸಿದ್ದಾರೆ.

ಮುಳಿಯ ರಾಘವಯ್ಯ