About the Author

ಲೇಖಕ ಎನ್.ಸಿ.ಸುಂದರರಾಜ ರಾವ್ 1944 ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲೂಕಿನ ಹೋದಿಗೆರೆ ಗ್ರಾಮದಲ್ಲಿ ಜನನ. ತಂದೆ ಚಂದ್ರಶೇಖರಯ್ಯ ತಾಯಿ ನಾಗರತ್ನಮ್ಮ ಹೋದಿಗೆರೆ .ಮೂಲತಃ ತುಮಕೂರು ನಿವಾಸಿಯಾಗಿದ್ದು ವೃತ್ತಿಯಲ್ಲಿ ಇಂಜನಿಯರ್ ಆಗಿ ನಿವೃತ್ತರಾಗಿದ್ದಾರೆ.. ಲೋಕೋಪಯೋಗಿ ಇಲಾಖೆಯಲ್ಲಿ ಮೂವ್ವತ್ತೆಂಟು ವರ್ಷಗಳ ಕಾಲ ಸೇವೆ ಸಲ್ಲಿಸಿ ಅನೇಕ ಸಮಾಜ ಕಲ್ಯಾಣ ಕಾರ್ಯಗಳನ್ನು ನಿರ್ವಹಿಸಿ ಕೀರ್ತಿಶೇಷರಾಗಿದ್ದಾರೆ. ಓದಿದ್ದು ಇಂಜಿನಿಯರಿಂಗ್ ಆಗಿದ್ದರೂ, ಇಂಜಿನಿಯರ್ ವೃತ್ತಿಯನ್ನೇ ಕೈಗೊಂಡಿದ್ದರೂ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಬಾಹ್ಯ ವಿದ್ಯಾರ್ಥಿಯಾಗಿ ಕನ್ನಡದಲ್ಲಿ ಎಂ.ಎ. ಅಧ್ಯಯನ ಮಾಡಿದ್ದಾರೆ. ವಿದ್ಯಾರ್ಥಿ ದೆಶೆಯಲ್ಲಿದ್ದಾಗ ವಾರ್ಷಿಕ ಸಂಚಿಕೆಗೆ ಅವರೇ ಬರೆದ ಒಂದು ಕವಿತೆ ಅಚಾನಕ್ ಆಗಿ ಕಣ್ಣಿಗೆ ಬಿದ್ದಾಗ ಅವರಲ್ಲಿ ಮತ್ತೆ ಬರೆಯುವ ಅತ್ತ್ಯಾಸಕ್ತಿ ಮೂಡುತ್ತದೆ. ಆಗ ಸುಂದರರಾಜ ಅವರು ತಮ್ಮ ಸಾಹಿತ್ಯ ರಚನೆಯ ಮಾಧ್ಯಮಕ್ಕೆ ಆಯ್ಕೆ ಮಾಡಿಕೊಂಡಿದ್ದು ವಚನ ಪ್ರಕಾರ.ಸಾಹಿತ್ಯ ಸಂಗೀತ,ಕ್ರೀಡೆ ,ಸಮಾಜ ಸೇವೆ ಇವರ ಹವ್ಯಾಸ.

ಕೃತಿಗಳು: ವಚನಧಾರೆ -ವಚನಗಳು(2022)  

ಎನ್.ಸಿ.ಸುಂದರರಾಜ ರಾವ್

Books by Author