About the Author

ಎನ್. ಧನಂಜಯ ಅವರು ಹವ್ಯಾಸಿ ರಂಗಭೂಮಿ ಕಲಾವಿದ. ಕಳೆದ ಇಪ್ಪತ್ತು ವರ್ಷಗಳಿಂದ ರಂಗಭೂಮಿಯಲ್ಲಿ ನಟ, ನಿರ್ದೇಶಕರಾಗಿದ್ದಾರೆ. ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಮೈಸೂರಿನ ಅನೇಕ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸಿದ ಇವರು ಮೈಸೂರು ಆಕಾಶವಾಣಿ ನಾಟಕ ವಿಭಾಗದ 'ಬಿ' ಗ್ರೇಡ್ ಕಲಾವಿದ. ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ 2005ರಲ್ಲಿ ಕಲಾವಿದ ನಾಗರಾಜ್ ಕೋಟೆಯವರ ತಂಡದ ಜೊತೆ ಬೆಂಗಳೂರಿನಲ್ಲಿ ಮರದ ಮೇಲೆ "ನೆಲೆ" ಎಂಬ ನಾಟಕ ಪ್ರದರ್ಶಿಸಿ ಅದು ಲಿಮ್ಕಾ ಪುಸ್ತಕ ದಾಖಲೆಗೆ ಸೇರಿದೆ. "ರಂಗ ಸ್ಪಂದನ" ಎಂಬ ರಂಗ ಸಂಬಂಧಿ ಲೇಖನಗಳ ಪುಸ್ತಕ ಬರೆದಿದ್ದಾರೆ. ಅದರ ಜೊತೆ ಅನೇಕ ರಂಗ ಸಂಬಂಧಿ ಪುಸ್ತಕಗಳಿಗೆ(ಅಭಿನಂದನಾ ಗ್ರಂಥಗಳು) ಸಂಪಾದಕರಾಗಿ ಕೆಲಸ ಮಾಡಿದ್ದಾರೆ. ಎಸ್.ಎಲ್ ಭೈರಪ್ಪನವರ ಕಾದಂಬರಿ 'ಮಂದ್ರ' ವನ್ನು ನಿರ್ದೇಶಿಸಿರುವ ಇವರು "ನಿರಾಕರಣ" ಕಾದಂಬರಿಯನ್ನು ರಂಗರೂಪ ಮಾಡಿ ಏಕವ್ಯಕ್ತಿ ಪ್ರದರ್ಶನ ನೀಡಿದ್ದಾರೆ. ವೃತ್ತಿ ರಂಗಭೂಮಿಯ ಶ್ರೇಷ್ಟ ನಟ "ಮೊಹಮ್ಮದ್ ಪೀರ್ " ಅವರ ಬಗ್ಗೆ ಪುಸ್ತಕ ಬರೆದಿದ್ದು ಅದು ಮೈಸೂರು ವಿಶ್ವ ವಿದ್ಯಾನಿಲಯದಿಂದ ಪ್ರಕಟವಾಗಬೇಕಿದೆ. ಆರ್.ಕೆ.ನಾರಾಯಣ್ ಅವರ 'ದಿ ಗೈಡ್ ' ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಮಂಡ್ಯ ರಮೇಶ್ ಅವರ ಜೀವನವನ್ನು ಅನಾವರಣಗೊಳಿಸುವ "ಮಂಡ್ಯ ರಮೇಶ್ - ನಟನ ಕಥೆ"  ಪುಸ್ತಕವನ್ನು ಬರೆದಿದ್ದಾರೆ.

ಎನ್. ಧನಂಜಯ