ದಿ ಗೈಡ್‌

Author : ಎನ್. ಧನಂಜಯ

Pages 284

₹ 135.00




Year of Publication: 2022
Published by: ವಸಂತ ಪ್ರಕಾಶನ
Address: # 360, 10ನೇ ಬಿ ಮುಖ್ಯರಸ್ತೆ, ಕಾಸ್ಮೊಪಾಲಿಟಿನ್ ಕ್ಲಬ್ ಹತ್ತಿರ, 3ನೇ ಬ್ಲಾಕ್, ಜಯನಗರ, ಬೆಂಗಳೂರು, ಕರ್ನಾಟಕ - 560011.
Phone: 080-40917099 / 7892106719

Synopsys

ದಿ ಗೈಡ್‌ ನಾರಾಯಣ ಆರ್‌.ಕೆ ಮೂಲ ಕೃತಿಯಾಗಿದ್ದು ಧನಂಜಯ ಎನ್‌ ಕನ್ನಡಕ್ಕೆ ಅನುವಾದಿಸಿದ್ದಾರೆ. ‘ರೇಲ್ವೆ ರಾಜು’ ಎಂದೆ ಪ್ರಸಿದ್ಧನಾದ ಒಬ್ಬ ನಿರಪಾಯಿ ಯುವಕನ ಕಥೆ ಇದು. ಯಾವ ಪೂರ್ವ ತಯ್ಯಾರಿಯೂ ಇರದೆ ಬದುಕನ್ನು ಅದು ಬಿಚ್ಚಿಕೊಂಡಂತೆ ಅದಕ್ಕೆ ತನ್ನನ್ನು ಒಡ್ಡಿಕೊಳ್ಳುತ್ತ ಹೋಗುವ ರಾಜು ಅಚಾನಕ್ ಆಗಿ ಸುಂದರ ನರ್ತಕಿ ರೋಸಿಯಿಂದ ಆಕರ್ಷಿತನಾಗುವನು. ಅವಳು ತನ್ನ ಸಂಶೋಧಕ ಪತಿಯಿಂದ ದೂರವಾಗುವುದಕ್ಕೂ ಕಾರಣನಾಗುವನು. ಸಹಜ ಪ್ರತಿಭೆಯ ರೋಸಿಯನ್ನು ತನ್ನ ಪರಿಶ್ರಮದಿಂದ ಒಬ್ಬ ದೊಡ್ಡ ನರ್ತಕಿಯನ್ನಾಗಿ ಮಾಡುತ್ತಾನೆ. ಅವಳೊಂದಿಗೆ ತಾನೂ ಪ್ರಸಿದ್ಧಿ ಮತ್ತು ಸಂಪತ್ತನ್ನು ಸಂಪಾದಿಸುತ್ತಾನೆ. ಸಂಪಾದಿಸುವುದರ ಜೊತೆಗೆ ಸಾಕಷ್ಟು ಕಳೆದುಕೊಳ್ಳುತ್ತಾನೆ. ಜೈಲುವಾಸವನ್ನೂ ಅನುಭವಿಸುವನು. ಜೈಲಿನಿಂದ ಹೊರಬಂದ ಮೇಲೆ ವಿಚಿತ್ರ ಪರಿಸ್ಥಿತಿಗೆ ಪ್ರಜ್ಞಾಪೂರ್ವಕವಾಗಿ ಒಪ್ಪಿಸಿಕೊಳ್ಳುತ್ತ ಒಂದರ್ಥದಲ್ಲಿ ‘ಸಂತ’ನಾಗಿ ಬಿಡುತ್ತಾನೆ. ಹೀಗೆ ‘ಗೈಡ್’ ರಾಜುವಿನ ಏಳು-ಬೀಳುಗಳ ಇತಿಹಾಸ. ಈ ಇತಿಹಾಸದ ನಿಗೂಢತೆಯನ್ನು ಆರ್.ಕೆ. ನಾರಾಯಣ್ ಅವರು ತಮ್ಮ ನವಿರಾದ ಹಾಸ್ಯ ಶೈಲಿಯಲ್ಲಿ ಭೇದಿಸುತ್ತಾರೆ. ಇದರೊಂದಿಗೆ ಕೆಲ ಮೂಲಭೂತ ಪ್ರಶ್ನೆಗಳನ್ನು ಎತ್ತುತ್ತಾರೆ. ನೈದಿಲೆಯ ತರಹ ‘The Guide’ ಭಾರತೀಯ ಸಮಾಜದ ಸರೋವರದ ಮೇಲೆ ತೇಲಿಸಿದರೂ, ಆ ಸಮಾಜದ ಉದ್ದಗಲಗಳನ್ನು ಭೇದಿಸುತ್ತದೆ. ಯಾವ ತಯ್ಯಾರಿಯೂ ಇರದೆ ಒಮ್ಮಿಂದೊಮ್ಮೆಲೆ ‘ಸಂತ’ನಾದ ವ್ಯಕ್ತಿಯೊಬ್ಬನ ಬದುಕನ್ನು ಚಿತ್ರಿಸಿದೆ.

About the Author

ಎನ್. ಧನಂಜಯ

ಎನ್. ಧನಂಜಯ ಅವರು ಹವ್ಯಾಸಿ ರಂಗಭೂಮಿ ಕಲಾವಿದ. ಕಳೆದ ಇಪ್ಪತ್ತು ವರ್ಷಗಳಿಂದ ರಂಗಭೂಮಿಯಲ್ಲಿ ನಟ, ನಿರ್ದೇಶಕರಾಗಿದ್ದಾರೆ. ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಮೈಸೂರಿನ ಅನೇಕ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸಿದ ಇವರು ಮೈಸೂರು ಆಕಾಶವಾಣಿ ನಾಟಕ ವಿಭಾಗದ 'ಬಿ' ಗ್ರೇಡ್ ಕಲಾವಿದ. ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ 2005ರಲ್ಲಿ ಕಲಾವಿದ ನಾಗರಾಜ್ ಕೋಟೆಯವರ ತಂಡದ ಜೊತೆ ಬೆಂಗಳೂರಿನಲ್ಲಿ ಮರದ ಮೇಲೆ "ನೆಲೆ" ಎಂಬ ನಾಟಕ ಪ್ರದರ್ಶಿಸಿ ಅದು ಲಿಮ್ಕಾ ಪುಸ್ತಕ ದಾಖಲೆಗೆ ಸೇರಿದೆ. "ರಂಗ ಸ್ಪಂದನ" ಎಂಬ ರಂಗ ಸಂಬಂಧಿ ಲೇಖನಗಳ ಪುಸ್ತಕ ಬರೆದಿದ್ದಾರೆ. ಅದರ ಜೊತೆ ಅನೇಕ ರಂಗ ಸಂಬಂಧಿ ಪುಸ್ತಕಗಳಿಗೆ(ಅಭಿನಂದನಾ ...

READ MORE

Related Books