About the Author

1992 ಜುಲೈ 11 ರಂದು ಜನಿಸಿದ ನದೀಮ ಸನದಿ ಬೆಳಗಾವಿ ಸಮೀಪದ ಶಿಂದೊಳ್ಳಿ ಗ್ರಾಮದವರು. ಧಾರವಾಡದ ಜವಾಹರ ನವೋದಯ ವಿದ್ಯಾಲಯದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ. ಸಿವಿಲ್ ಎಂಜಿನೀಯರಿಂಗ್ ವಿಷಯದಲ್ಲಿ ಪದವಿ ಮತ್ತು  Construction Technology ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಪ್ರತಿಷ್ಠಿತ ಗ್ಯಾಮನ್ ಇಂಡಿಯಾ ಲಿಮಿಟೆಡ್‍ನಲ್ಲಿ ಎರಡು ವರ್ಷ ಸಹಾಯಕ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿ ಸಧ್ಯಕ್ಕೆ ಬೆಳಗಾವಿಯ ಜೈನ್ ಅಭಿಯಾಂತ್ರಿಕ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಸಾಹಿತ್ಯದ ಓದು-ಬರಹದಲ್ಲಿ ವಿಶೇಷ ಆಸಕ್ತಿ. ರಾಷ್ಟ್ರಮಟ್ಟದ ಟೇಬಲ್ ಟೆನ್ನಿಸ್ ಆಟಗಾರರು ಸಹ. ಓದು, ಬರಹದ ಹವ್ಯಾಸವಿರುವ ನದೀಮ ಅವರ ಮೊದಲ ಕವನ ಸಂಕಲನ 'ಹುಲಿಯ ನೆತ್ತಿಗೆ ನೆರಳು'  ಪ್ರಕಟವಾಗಿದೆ. 

ನದೀಮ ಸನದಿ

(11 Jul 1992)

BY THE AUTHOR