ಹುಲಿಯ ನೆತ್ತಿಗೆ ನೆರಳು

Author : ನದೀಮ ಸನದಿ

Pages 88

₹ 85.00




Year of Publication: 2019
Published by: ಸಮಕಾಲೀನ ಪುಸ್ತಕ
Address: ಶಿಂದೊಳ್ಳಿ ಪೋಸ್ಟ್, ಬೆಳಗಾವಿ ತಾಲೋಕು, ಬೆಳಗಾವಿ ಜಿಲ್ಲೆ- 591124

Synopsys

ನದೀಮ ಸನದಿ ಅವರ ಮೊದಲ ಕವನ ಸಂಕಲನ ‘ಹುಲಿಯ ನೆತ್ತಿಗೆ ನೆರಳು’. ‘ಬೆಳಗಾವಿ ಸಮೀಪದ ಶಿಂದೊಳ್ಳಿ ಗ್ರಾಮದ ಸನದಿ ಕುಟುಂಬವು ಕನ್ನಡ ಸಾಹಿತ್ಯಕ್ಕೆ ಈಗಾಗಲೇ ಮೌಲಿಕವಾದ ಕೃತಿಗಳನ್ನು ನೀಡಿ ಕನ್ನಡ ಸಾಹಿತ್ಯ ಶಾರದೆಯನ್ನು ಇನ್ನಷ್ಟು ಸಿರಿವಂತ ಮಾಡಿದ್ದಾರೆ. ಶಿಕ್ಷಕರೂ, ಸಹೃದಯಿ ಸಾಹಿತಿಗಳೂ ಆಗಿರುವ ಎ. ಎ. ಸನದಿಯವರ ಮಗ ನದೀಮ ಸನದಿ. ನದೀಮ ಸನದಿ ಅವರು ಬರೆದ ಕವಿತೆಗಳನ್ನು ನೋಡಿದರೆ ಇಡೀ ಸನದಿ ಮನೆತನದ ಸಾಹಿತ್ಯದ ಪ್ರತಿಭೆಯನ್ನು ಅರೆದು ಕುಡಿದವನಂತೆ ಕಾಣಿಸುತ್ತಾನೆ, ಜೊತೆಗೆ ಯುವ ವಯಸ್ಸಿನಲ್ಲಿಯೇ ಪ್ರಖರವಾದ ವೈಚಾರಿಕತೆಯನ್ನು ಬೆಳೆಸಿಕೊಂಡು ಕಾವ್ಯ ಪ್ರಕಾರಕ್ಕೆ ಮುಖಾಮುಖಿಯಾಗಿದ್ದಾನೆ ಎನ್ನುತ್ತಾರೆ ಹಿರಿಯ ಸಾಹಿತಿ ಡಾ. ಸರಜೂ ಕಾಟ್ಕರ್.

ಈ ಪುಸ್ತಕಕ್ಕೆ ಬೆನ್ನುಡಿಯನ್ನು ಹಿರಿಯ ಸಾಹಿತಿ ರೆಹಮತ್ ತರೀಕೆರೆಯವರು ಬರೆದಿದ್ದಾರೆ. ಅವರೇ ಹೇಳುವಂತೆ ‘ನದೀಮ ಸನದಿಯವರ ಕವನಗಳ ವಿಶಿಷ್ಟತೆಯನ್ನು ಸರಳತೆ ಆಪ್ತತೆ ಮಾನವೀಯತೆ ಎಂಬ ಮೂರು ಪದಗಳಲ್ಲಿ ಹಿಡಿಯಬಹುದು. ನಮ್ಮ ಕಾಲದ ಆರೋಗ್ಯವಂತ ಮನಸ್ಸೊಂದು ಲೋಕಕ್ಕೆ ಮಿಡಿದ ಸಾಕ್ಷ್ಯದಂತಿರುವ ಇಲ್ಲಿನ ಕವನಗಳು, ದ್ವೇಷದ ಗೋಡೆಗಳನ್ನು ಕಟ್ಟುವ ಸಮಾಜದೊಳಗೆ ನಿಂತು ಜಾತಿಮತಗಳಾಚೆಗಿನ ದೇವರುಧರ್ಮಗಳಾಚೆ ಮನುಷ್ಯ ಪ್ರೀತಿಯನ್ನು ಹಾರೈಸುತ್ತವೆ. ಈ ಪ್ರೀತಿಯು ಮನುಷ್ಯ ಮತ್ತು ನಿಸರ್ಗಗಳ ನಡುವಿನದು ಕೂಡ.  ಆಳವಾದ ಶ್ರದ್ಧೆಯಿಂದ ವ್ಯಕ್ತವಾಗುವ ಖಾಸಗಿಭಾವವು ನಾಡಿನ ರಾಜಕೀಯ ಕಾವ್ಯವೂ ಆಗಬಲ್ಲದು. ಸ್ವಂತಿಕೆಯು ಸಾರ್ವಜನಿಕವೂ ಆಗಬಲ್ಲದು ಎಂಬಂತೆ ಇಲ್ಲಿನ ಪ್ರೇಮಪದ್ಯಗಳಿವೆ. ಕವಿಗೆ ಸಮಾಜದಲ್ಲಿರುವ ವೈರುಧ್ಯಗಳು ಬಹಳ ಕಾಡಿಸಿದಂತಿದೆ. ಚರಿತ್ರೆಯು ವರ್ತಮಾನದಲ್ಲಿ ಪಡೆಯುವ ಊಹಾತೀತ ರೂಪಾಂತರಗಳ ಬಗ್ಗೆ ಇಲ್ಲಿ ವಿಸ್ಮಯವಿದೆ. ಇದನ್ನು ಕವನಗಳು ಚುರುಕಾದ ವಿಷಾದ ವ್ಯಂಗ್ಯಗಳಲ್ಲಿ ಕಾಣಿಸುತ್ತದೆ. ಕಷ್ಟವಿಲ್ಲದ ಭಾರವಿಲ್ಲದೆ ಲವಲವಿಕೆಯಿಂದ ಎದುರಿಗೆ ಒಬ್ಬರನ್ನು ಕೂರಿಸಿಕೊಂಡು ಆಡಿದ ಸಹಜ ಮಾತುಕತೆಯಂತಿವೆ’. ಈ ಎಲ್ಲಾ ಕಾರಣಗಳಿಂದ ಕೆಲವೆಡೆ ಮಾತಾಳಿಯೂ ಆಗಿರುವ ಕವನಗಳು ಹೆಚ್ಚು ತೊಂದರೆ ಕೊಡದೆ ಸಹೃದಯರ ಮನಸ್ಸನ್ನು ತಾಕುತ್ತವೆ.

About the Author

ನದೀಮ ಸನದಿ
(11 July 1992)

1992 ಜುಲೈ 11 ರಂದು ಜನಿಸಿದ ನದೀಮ ಸನದಿ ಬೆಳಗಾವಿ ಸಮೀಪದ ಶಿಂದೊಳ್ಳಿ ಗ್ರಾಮದವರು. ಧಾರವಾಡದ ಜವಾಹರ ನವೋದಯ ವಿದ್ಯಾಲಯದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ. ಸಿವಿಲ್ ಎಂಜಿನೀಯರಿಂಗ್ ವಿಷಯದಲ್ಲಿ ಪದವಿ ಮತ್ತು  Construction Technology ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರತಿಷ್ಠಿತ ಗ್ಯಾಮನ್ ಇಂಡಿಯಾ ಲಿಮಿಟೆಡ್‍ನಲ್ಲಿ ಎರಡು ವರ್ಷ ಸಹಾಯಕ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿ ಸಧ್ಯಕ್ಕೆ ಬೆಳಗಾವಿಯ ಜೈನ್ ಅಭಿಯಾಂತ್ರಿಕ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಸಾಹಿತ್ಯದ ಓದು-ಬರಹದಲ್ಲಿ ವಿಶೇಷ ಆಸಕ್ತಿ. ರಾಷ್ಟ್ರಮಟ್ಟದ ಟೇಬಲ್ ಟೆನ್ನಿಸ್ ಆಟಗಾರರು ಸಹ. ಓದು, ಬರಹದ ಹವ್ಯಾಸವಿರುವ ನದೀಮ ಅವರ ...

READ MORE

Related Books