About the Author

ಬದುಕಿನ ಹಲವಾರು ಆಯಾಮಗಳನ್ನು ಹುಡುಕುವ ಸಂಶೋಧಕಿ ನಾಗಾಬಾಯಿ ಬಿ. ಬುಳ್ಳಾ ಅವರು  1957 ಜುಲೈ 01 ರಂದು ವಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಆಲಮೇಲದಲ್ಲಿ ಜನಿಸಿದರು. ಡಾ. ಸಿದ್ದಯ್ಯ ಪುರಾಣಿಕರ ಕೃತಿಗಳು ಎಂಬ ಸಂಶೋಧನಾ ಕೃತಿಯನ್ನು ಕನ್ನಡದಲ್ಲಿ ಹೊರ ತಂದಿದ್ಧಾರೆ. ಅರಿವು, ಕಾವ್ಯಾನಂದ, ಜಯತೀರ್ಥ ರಾಜಪುರೋಹಿತ ಜಿ. ದೇವೇಂದ್ರಪ್ಪ ಘಾಳಪ್ಪ, ನಿಜಗುಣ ಶಿವಯೋಗಿ, ಶ್ರೀಮಾತಾ ಮಾಣಿಕೇಶ್ವರಿ, ಆಧುನಿಕ ಸಾಹಿತ್ಯ ಸಾಧಕರು ಸಂಶೋಧನಾ ಕೃತಿ, ನರಹರಿ ಮುತ್ತಿನಹಾರ ಮಾಲಿಕೆ, ಅಖಿಲ ಕರ್ನಾಟಕ ಸ್ನೇಹ ಗಂಗಾವಾಹಿನಿ, ಅಂಬಿಗರ ಚೌಡಯ್ಯ, ಪ್ರಾಚೀನ ಕನ್ನಡ ಸಾಹಿತ್ಯ ಸಂಗ್ರಹ, ಮಹಾಕಾವ್ಯ ಚಿಂತನೆ, ಆಯ್ದ ವೈಜ್ಞಾನಿಕ ಲೇಖನಗಳು, ಮೌನವೊಡೆದ ಮಾತು, ಗಂಗಾಚೈತನ್ಯ ಮುಂತಾದ ಕೃತಿಗಳನ್ನು ಸಂಪಾದಿಸಿದ್ದಾರೆ. ಸುವರ್ಣ ಕರ್ನಾಟಕ ರಾಜ್ಯಪ್ರಶಸ್ತಿ ಕೊಪ್ಪಳ, ಧರಿನಾಡು ಕನ್ನಡ ಸಂಘ ಬೀದರದಿಂದ ಕಲಾಜ್ಯೋತಿ' ಪ್ರಶಸ್ತಿ, ಕರ್ನಾಟಕ ಮಹಿಳಾರತ್ನ ಪ್ರಶಸ್ತಿ, ಸಾವಿತ್ರಿಬಾಯಿ ಫುಲೆಪ್ರಶಸ್ತಿ - ದಲಿತ ಸಾಹಿತ್ಯ ಪರಿಷತ್ತು ದೆಹಲಿ ೨೦೧೦, ಆಳಂದ ತಾಲ್ಲೂಕಿನ 3ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರು ಆಗಿದ್ದರು. 

ಗುರುವಾಗಿ, ಬರಹಗಾರರಾಗಿ, ಹಲವು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುವ ಡಾ.ಸಿದ್ದರಾಮ ಸ್ವಾಮೀಜಿ ಅವರು ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಹಲಗಲಿ ಗ್ರಾಮದಲ್ಲಿ ಜನಿಸಿದರು. 1958 ಡಿಸೆಂಬೆರ್ 12 ರಂದು ಜನಿಸಿರುವ ಇವರ ಬಾಲ್ಯದ ಹೆಸರು ಕರವೀರಯ್ಯ. ಎಲ್ಲರೂ ವೀರಯ್ಯ ಎಂದೇ ಕರೆಯುತ್ತಿದ್ದರು. ಪ್ರಾಥಮಿಕ ಶಿಕ್ಷಣವನ್ನು ಹಲಗಲಿ ಮತ್ತು ಪ್ರೌಢಶಿಕ್ಷಣವನ್ನು ಶಿವಯೋಗ ಮಂದಿರದಲ್ಲಿ ಪೂರ್ಣಗೊಳಿಸಿರುವ ಸಿದ್ದರಾಮ ಶ್ರೀಗಳು, ಹೆಚ್ಚಿನ ಶಿಕ್ಷಣಕ್ಕಾಗಿ ಕಾಶಿಗೆ ತೆರಳಿದರು. ಅಲ್ಲಿ ಸೆಂಟ್ರಲ್ ಹಿಂದು ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ, ಬಳಿಕ ಪದವಿ ಮುಗಿಸಿದರು. ಹಿಂದಿ ಮತ್ತು ಸಂಸ್ಕೃತ ಭಾಷೆಗಳಲ್ಲಿ ಎರಡು ಎಂ.ಎ.ಪದವಿ ಗಳಿಸಿದರು. ಧಾರವಾಡ ವಿವಿಯಿಂದ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಶ್ರೀಗಳು, ಕನ್ನಡ, ಹಿಂದಿ, ಸಂಸ್ಕೃತ, ಮರಾಠಿ ಹಾಗೂ ಇಂಗ್ಲಿಷ್​ನಲ್ಲಿ ಭಾಷಾಪ್ರೌಢತೆ ಸಾದಿಸಿದ್ಧಾರೆ. ಪ್ರಸ್ತುತ ಅವರು ಶ್ರೀ ರುದ್ರಾಕ್ಷಿ ಮಠದ ಸ್ವಾಮೀಜಿಯಾಗಿದ್ದಾರೆ. 

ನಾಗಾಬಾಯಿ ಬಿ. ಬುಳ್ಳಾ

(01 Jul 1957)