About the Author

ನಾಗರಾಜ ಪೂಜಾರ, ಹೂವಿನಹಡಗಲಿಯ ಮಾಗಳದಲ್ಲಿ 1984ರಲ್ಲಿ ಜನನ. ತಂದೆ ಶಿವಪ್ಪ, ತಾಯಿ ವಿನೋದ. ಇಂಗ್ಲಿಷ್ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಸ್ತುತ ರಾಯಚೂರಿನ ಸೋಮನ ಮರಡಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಇಂಗ್ಲಿಷ್ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅನುವಾದ ಮತ್ತು ಕಾವ್ಯದ ಬಗೆಗೆ ಅಭಿರುಚಿಹೊಂದಿದ್ದು ಸುಮಾರು 12 ವರ್ಷಗಳ ಕಾಲ ಕಾವ್ಯದ ಜೊತೆಗಿನ ಅನುಸಂಧಾನದಿಂದ ’ಅಪ್ಪನ ಗಿಲಾಸು' ಎಂಬ ಚೊಚ್ಚಲ ಕವನ ಸಂಕಲನ ಪ್ರಕಟಿಸಿದ್ದಾರೆ. ಜೊತೆಗೆ ಕಾವ್ಯದ ಬಗೆಗೆ ಚಿಂತನಾತ್ಮಕವಾಗಿ ಕಾರ್ಯಪ್ರವೃತ್ತರಿರುವ 'ಕಾಜಾಣ' ಎಂಬ ಯುವಬಳಗದೊಂದಿಗೆ ಸದಾ ಕ್ರಿಯಾಶೀಲರಾಗಿರುವ ನಾಗರಾಜ 'ಕಾಜಾಣ ಪ್ರಕಾಶನ’ ಪ್ರಾರಂಭಿಸುವುದರ ಮೂಲಕ ಸಾಹಿತ್ಯಕವಾಗಿ ಹೊಸ ಹೆಜ್ಜೆ ಹಾಕುತ್ತಿದಾರೆ.

ನಾಗರಾಜ ಪೂಜಾರ