ಅಪ್ಪನ ಗಿಲಾಸು

Author : ನಾಗರಾಜ ಪೂಜಾರ

Pages 1
Published by: ಕಾಜಾಣ ಪ್ರಕಾಶನ

Synopsys

ಇಂಗ್ಲಿಷ್ ಅಧ್ಯಾಪಕರಾಗಿರುವ ನಾಗರಾಜ ಪೂಜಾರ ಅವರ ಮೊದಲ ಕವನ ಸಂಕಲನ. ಈ ಸಂಕಲನದ ಕವಿತೆಗಳ ಬಗ್ಗೆ ಕವಿ ಬಿ. ಪೀರಬಾಷ ಅವರು ’ಕವಿತೆಯನ್ನು ಕಲಾತ್ಮಕಗೊಳಿಸುವ ಹಂಬಲದ ಕುಸುರಿಯ ಅತ್ಯಾಸಕ್ತಿಯಲ್ಲಿ ನಾಗರಾಜ್ ತಮ್ಮ ಕಾವ್ಯದ ತಿರುಳಿಗಿಂತ ತೊಗಟೆಯನ್ನು ಬಲಗೊಳಿಸುತ್ತಾರೆ. ಇವರ ಚಿತ್ರದಲ್ಲಿ ಕ್ಲಿಕ್ಕಿಸಿದ ಪಾತ್ರಗಳು ಅಭಿವ್ಯಕ್ತಿಯ ಇಕಟ್ಟಿನಿಂದ ಹೊರ ನೆಗೆವ ಹಂಬಲದಲ್ಲಿ ಅಂಬೆಗಾಲಿಟ್ಟು ಓಡುತ್ತವೆ. ಕವಿ ನಾಗರಾಜ, ಕಂಡುಂಡ ಬದುಕಿನ ಅನುಭವಗಳನ್ನು ಕವಿತೆಗಳಲ್ಲಿ ಕಾಣಿಸುವ ಪ್ರಯತ್ನದಲ್ಲಿ, ನಿಂತಲ್ಲಿಂದ ತೋರಿಸುವ ಮಟ್ಟಿಗೆ ಸಫಲರಾಗಿದ್ದಾರೆ. ಹೀಗೆ ತೋರುವಿಕೆ, ಓದುಗನಿಗೆ ಕಾಣಿಸುವಲ್ಲಿ ಅವರ ಕಾವ್ಯದ ಯಶಸ್ಸು. ಇದಕ್ಕಿಂತ ಇನ್ನೇನು ಬೇಕು? ನಾಗರಾಜ ಅವರ ಮೊದಲ ಕವನ ಸಂಕಲನ ಇದು. ಮೊದಲೆಂಬುದರ ಶಕ್ತಿ ಮಿತಿಗಳೆರಡನ್ನೂ ಈ ಕವಿತೆಗಳು ಒಳಗಾಗಿಸಿಕೊಂಡಿವೆ." ಎಂದಿದ್ದಾರೆ. 

About the Author

ನಾಗರಾಜ ಪೂಜಾರ

ನಾಗರಾಜ ಪೂಜಾರ, ಹೂವಿನಹಡಗಲಿಯ ಮಾಗಳದಲ್ಲಿ 1984ರಲ್ಲಿ ಜನನ. ತಂದೆ ಶಿವಪ್ಪ, ತಾಯಿ ವಿನೋದ. ಇಂಗ್ಲಿಷ್ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಸ್ತುತ ರಾಯಚೂರಿನ ಸೋಮನ ಮರಡಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಇಂಗ್ಲಿಷ್ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅನುವಾದ ಮತ್ತು ಕಾವ್ಯದ ಬಗೆಗೆ ಅಭಿರುಚಿಹೊಂದಿದ್ದು ಸುಮಾರು 12 ವರ್ಷಗಳ ಕಾಲ ಕಾವ್ಯದ ಜೊತೆಗಿನ ಅನುಸಂಧಾನದಿಂದ ’ಅಪ್ಪನ ಗಿಲಾಸು' ಎಂಬ ಚೊಚ್ಚಲ ಕವನ ಸಂಕಲನ ಪ್ರಕಟಿಸಿದ್ದಾರೆ. ಜೊತೆಗೆ ಕಾವ್ಯದ ಬಗೆಗೆ ಚಿಂತನಾತ್ಮಕವಾಗಿ ಕಾರ್ಯಪ್ರವೃತ್ತರಿರುವ 'ಕಾಜಾಣ' ಎಂಬ ಯುವಬಳಗದೊಂದಿಗೆ ಸದಾ ಕ್ರಿಯಾಶೀಲರಾಗಿರುವ ನಾಗರಾಜ 'ಕಾಜಾಣ ಪ್ರಕಾಶನ’ ಪ್ರಾರಂಭಿಸುವುದರ ಮೂಲಕ ಸಾಹಿತ್ಯಕವಾಗಿ ಹೊಸ ...

READ MORE

Related Books