About the Author

ನಾಗರಾಜ ಕಾಪಸಿ ಅವರು ಮೂಲತಃ  ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಬೀರನಗಡ್ಡಿ ಗ್ರಾಮದವರು.  ಸ್ವಗ್ರಾಮದಲ್ಲಿಯೇ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಗೋಕಾಕ್‌ನಲ್ಲಿ ಮುಗಿಸಿದರು. ಪದವಿ ಶಿಕ್ಷಣವನ್ನು ಕಲ್ಲೋಳಿಯಲ್ಲಿ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಇತಿಹಾಸ ಮತ್ತು ಮರಾತತ್ವಶಾಸ್ತ್ರ ಪದವಿ, ಪಿ.ಜಿ. ಡಿಪ್ಲೋಮಾ ಇನ್ ಆರ್ಟ್ ಹಿಸ್ಟರಿ ಪದವಿಯನ್ನು ಪಡೆದರು. ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಿಂದ ಬಿ.ಎಡ್., ಶಿಕ್ಷಣ ಮತ್ತು ಪಿ.ಜಿ.ಡಿಪ್ಲೋಮಾ ಇನ್ ಟೂರಿಸಂ ಪದವಿಯನ್ನು ಪಡೆದರು.

ಒಂದು ವರ್ಷಗಳ ಕಾಲ ಗೋಕಾಕ್‌ ಜೆ.ಎಸ್‌.ಎಸ್‌. ಪದವಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ ಅವರು . 2014 ರಲ್ಲಿ ಪೋಲಿಸ್ ಇಲಾಖೆಯಲ್ಲಿ ಕಾನ್ಸ್‌ಟೇಬಲ್ ಆಗಿ ನೇಮಕಗೊಂಡರು. ಪ್ರಸ್ತುತ ಮಂಗಳೂರಿನಲ್ಲಿ ಹೆಡ್‌ಕಾನ್ಸ್‌ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

ಕೃತಿಗಳು: 'ನಮ್ಮ ಹೆಮ್ಮೆಯ ಹಂಪಿ',  'ಬಿಜಾಪುರ ಭವ್ಯ ಪರಂಪರೆ' 

ನಾಗರಾಜ ಕಾಪಸಿ