About the Author

ನಾಗಯ್ಯಸ್ವಾಮಿ ಅಲ್ಲೂರ ಅವರು ಮೂಲತಃ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಅಲ್ಲೂರ (ಬಿ) ಗ್ರಾಮದವರು. ತಂದೆ ವೀರಯ್ಯಸ್ವಾಮಿ, ತಾಯಿ ಮಹಾದೇವಮ್ಮ. ಬಿ.ಎ. ಬಿ.ಇಡಿ ಪದವೀಧರರು. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಕ್ರಮವಾಗಿ ಅಲ್ಲೂರ (ಬಿ) ಅಳ್ಳಳ್ಳಿ ಯಲ್ಲಿ ಪೂರೈಸಿ, ಪಿಯುಸಿ ಹಾಗೂ ಬಿಎ ಪದವಿಯನ್ನು ಸುರಪುರದಲ್ಲಿ ಪೂರ್ಣಗೊಳಿಸಿದರು. ಚಿತ್ತಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ತಾಲೂಕು ಶರಣ ಸಾಹಿತ್ಯ ಪರಿಷತ್ತ ಅಧ್ಯಕ್ಷರಾಗಿದ್ದರು. ನಾಗಾವಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾಗಿದ್ದಾರೆ. ನಾಡಿನ ವಿವಿಧ ಪತ್ರಿಕೆಗಳ ತಾಲೂಕು ವರದಿಗಾರರಾಗಿಯೂ ಕೆಲಸ ಮಾಡಿದ್ದಾರೆ. ಕನ್ನಡ ಸಾಹಿತ್ಯದ ತಾಲೂಕು ಸಮ್ಮೇಳನ, ವಲಯ ಸಮ್ಮೇಳನ, ಜಾನಪದ ಕಲಾವಿದರ ಸಮ್ಮೇಳನ ಆಯೋಜಿಸಿದ ಅನುಭವವಿದೆ. 

ಕೃತಿಗಳು : ಕಾವ್ಯತೊರೆ (ಸಂಪಾದನೆ: ಕವನ ಸಂಕಲನ), 

ಪ್ರಶಸ್ತಿ-ಪುರಸ್ಕಾರಗಳು: ಗ್ರಾಮೀಣ ಉತ್ತಮ ವರದಿಗಾರ ಪ್ರಶಸ್ತಿ, ಆದರ್ಶ ಪತ್ರಕರ್ತ ಪ್ರಶಸ್ತಿ, ಸಗರನಾಡು ರತ್ನ ಪ್ರಶಸ್ತಿ ಸೇರಿದಂತೆ ವಿವಿಧ ಸಂಸ್ಥೆಗಳಿಂದ ಗೌರವ-ಸನ್ಮಾನಗಳು ಲಭಿಸಿವೆ.  

ನಾಗಯ್ಯಸ್ವಾಮಿ ಅಲ್ಲೂರ