About the Author

ನಜ್ಮಾ ನಜ್ಹೀರ್ ಚಿಕ್ಕನೇರಳೆ ಕೊಡಗು ಮತ್ತು ಮೈಸೂರು ಜಿಲ್ಲೆಯ ಗಡಿಪ್ರದೇಶದ ಕುಶಾಲನಗರ ಮತ್ತು ಪಿರಿಯಾಪಟ್ಟಣದ ನಡುವೆ ಇರುವ ಸಣ್ಣ ಹಳ್ಳಿಯಾದ ಚಿಕ್ಕನೇರಳೆಯವರು. ತಂದೆ ನಝೀರ್, ತಾಯಿ ಶಬಾನಾ ಬಾನು. ಕೃಷಿಕ ಕುಟುಂಬದ ನಜ್ಮಾ ಚಿಕ್ಕವಯಸ್ಸಿನಿಂದಲೇ ಬರಹದ ಗೀಳು ಹತ್ತಿಸಿಕೊಂಡವರು. ಸಮಾಜದ ಓರೆಕೋರೆಗಳನ್ನು ಕಂಡು ಬೆಳೆದವವರು. ಬಡತನ, ಕಷ್ಟ, ದಬ್ಬಾಳಿಕೆ ಕಂಡು ಹೋರಾಟದ ಹಾದಿ ಹಿಡಿದವರು. ನಜ್ಮಾ 17ರ ಹರೆಯದಲ್ಲಿ ಬೆಂಗಳೂರು ಸೇರಿ ರಂಗಭೂಮಿ ನಂಟು ಬೆಳೆಸಿದರು.

ಎಳೆಯದರಲ್ಲೇ ಸಮಾಜದ ಹಲವು ಮುಖಗಳನ್ನು ಕಂಡ ನಜ್ಮಾ ರೇಡಿಯೋ ಜಾಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ದೊಡ್ಡ ದೊಡ್ಡ ಕಾರ್ಯಕ್ರಮಗಳ ನಿರೂಪಕಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಪರಭಾಷಾ ಚಿತ್ರನಟಿಯರ 40ಕ್ಕೂ ಹೆಚ್ಚು ಸಿನಿಮಾಗಳಿಗೆ ಕಂಠದಾನವನ್ನೂ ಮಾಡಿದ್ದಾರೆ. 50ಕ್ಕೂ ಅಧಿಕ ಜಾಹೀರಾತು, ಡಾಕ್ಯುಮೆಂಟರಿಗಳಿಗೆ ಹಿನ್ನೆಲೆ ಧ್ವನಿ ನೀಡಿದ್ದಾರೆ. ಕವನ ಬರೆಯೋದು ನಜ್ಮಾರಆಸಕ್ತಿಯ ಕ್ಷೇತ್ರ. ಇತ್ತೀಚೆಗಷ್ಟೇ ಬೆಂಗಳೂರಲ್ಲಿ ನಜ್ಮಾ ಅವರ ಚೊಚ್ಚಲ ಕೃತಿ "ಪಿವೋಟ್ ಪದ್ಯಗಳು" ಕೃತಿ ಬಿಡುಗಡೆಗೊಂಡಿದೆ. 

ನಜ್ಮಾ ನಜ್ಹೀರ್ ಚಿಕ್ಕನೇರಳೆ

(19 Mar 1997)