ಪಿವೋಟ್ ಪದ್ಯಗಳು

Author : ನಜ್ಮಾ ನಜ್ಹೀರ್ ಚಿಕ್ಕನೇರಳೆ

Pages 58

₹ 75.00
Year of Publication: 2019
Published by: ಯುಗಧರ್ಮ ಪ್ರಕಾಶನ
Address: ಯುಗಧರ್ಮ ಪ್ರಕಾಶನ, ಬೆಂಗಳೂರು
Phone: 099022 36022

Synopsys

‘ಪಿವೋಟ್ ಪದ್ಯಗಳು’ ನಜ್ಮಾ ನಜ್ಹೀರ್ ಚಿಕ್ಕನೇರಳೆ ಅವರ ಮೊದಲ ಕವನ ಸಂಕಲನ. ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, ಇವರ ಧನಸಹಾಯ ಪಡೆದು ಪ್ರಕಟಗೊಂಡ ಕೃತಿ. ಚಿಕ್ಕನೇರಳೆ ಎಂಬ ಪುಟ್ಟ ಗ್ರಾಮದ ಹೊಗೆಸೊಪ್ಪಿನ ಕಮಟು ಘಾಟಿನಿಂದ ಹೊರ ಬಂದು ಮಲ್ಲಿಯ ಕಂಪು ಬೀರುವುದು, ಧರ್ಮವನ್ನೂ ಮೀರಿ ಹೆಣ್ಣೊಬ್ಬಳು ಅನಂತ ಆಗಸದತ್ತ ಹೆಜ್ಜೆ ಗುರುತು ಮೂಡಿಸುವುದು ನಿಜಕ್ಕೂ ಸುಮ್ಮೆನೆ ಮಾತಲ್ಲ. ಅಂತಹ ಕಮಟು ಘಾಟಿಗೂ ಗಂಧ-ಗಾಳಿ ಬಳಿದು ಅರಳಿದ ತಾಜಾ ಪ್ರತಿಭೆ ನಜ್ಮಾ. ಆಕೆಯ ಮಾತಿನಲ್ಲೇ ಹೇಳುವುದಾದರೆ, 

‘ಓ ಖುದಾ….

ಹೆಣ್ಣು ಕಲಿತರೆ 

ಮನೆಯಿಂದ ಹೊರಗೆ ಕಾಲ್ಕಿತ್ತರೆ

ನಿಸ್ತೇಜತೆಯ ತೊರೆದರೆ

ನಾಲ್ವರೊಟ್ಟಿಗೆ ಬೆರೆತರೆ 

ಕುಂತರೆ, ನಿಂತರೆ, ನಕ್ಕರೆ, ಅತ್ತರೆ

ಬರೆದರೆ, ಹಾಡಿದರೆ

ಎಲ್ಲದಕ್ಕೂ ಪ್ರಶ್ನೆ…

ನಾವು ಬಂಡೆದ್ದು ಬಿಟ್ಟವೆಂಬ

ಭಯ ನಿನಗೂ ಇದೆಯೇನು’...

ಹೀಗೆ ಅಸ್ತಿತ್ವಕ್ಕೆ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಲೇ ನಜ್ಮಾ ಕಾವ್ಯದೊಂದಿಗಿನ ಬದುಕಿನ ವಿಶ್ಲೇಷಣೆಗಳೊಂದಿಗೆ ಈ ಕವನ ಸಂಕಲನ ರಚಿಸಿದ್ದಾರೆ. ಇದು ಕನ್ನಡಕಾವ್ಯಲೋಕಕ್ಕೆ ದಕ್ಕುತ್ತಿರುವ ವಿನೂತನ ಕೃತಿ ಎನ್ನಬಹುದು. 

 

About the Author

ನಜ್ಮಾ ನಜ್ಹೀರ್ ಚಿಕ್ಕನೇರಳೆ
(19 March 1997)

ನಜ್ಮಾ ನಜ್ಹೀರ್ ಚಿಕ್ಕನೇರಳೆ ಕೊಡಗು ಮತ್ತು ಮೈಸೂರು ಜಿಲ್ಲೆಯ ಗಡಿಪ್ರದೇಶದ ಕುಶಾಲನಗರ ಮತ್ತು ಪಿರಿಯಾಪಟ್ಟಣದ ನಡುವೆ ಇರುವ ಸಣ್ಣ ಹಳ್ಳಿಯಾದ ಚಿಕ್ಕನೇರಳೆಯವರು. ತಂದೆ ನಝೀರ್, ತಾಯಿ ಶಬಾನಾ ಬಾನು. ಕೃಷಿಕ ಕುಟುಂಬದ ನಜ್ಮಾ ಚಿಕ್ಕವಯಸ್ಸಿನಿಂದಲೇ ಬರಹದ ಗೀಳು ಹತ್ತಿಸಿಕೊಂಡವರು. ಸಮಾಜದ ಓರೆಕೋರೆಗಳನ್ನು ಕಂಡು ಬೆಳೆದವವರು. ಬಡತನ, ಕಷ್ಟ, ದಬ್ಬಾಳಿಕೆ ಕಂಡು ಹೋರಾಟದ ಹಾದಿ ಹಿಡಿದವರು. ನಜ್ಮಾ 17ರ ಹರೆಯದಲ್ಲಿ ಬೆಂಗಳೂರು ಸೇರಿ ರಂಗಭೂಮಿ ನಂಟು ಬೆಳೆಸಿದರು. ಎಳೆಯದರಲ್ಲೇ ಸಮಾಜದ ಹಲವು ಮುಖಗಳನ್ನು ಕಂಡ ನಜ್ಮಾ ರೇಡಿಯೋ ಜಾಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ದೊಡ್ಡ ದೊಡ್ಡ ಕಾರ್ಯಕ್ರಮಗಳ ನಿರೂಪಕಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಪರಭಾಷಾ ...

READ MORE

Related Books