About the Author

ನರೇಂದ್ರ ನಾಯಕ್ ಅವರು ಮಂಗಳೂರಿನ ಕಸ್ತೂರ ಬಾ ವೈದ್ಯಕೀಯ ಕಾಲೇಜಿನ ಬಯೋಕೆಮಿಸ್ಟ್ರಿ ವಿಭಾಗದ ನಿವೃತ್ತ (2006) ಪ್ರಾಧ್ಯಾಪಕರು. ಮೂಲತಃ ಮಂಗಳೂರಿನವರು. ಪವಾಡ ಬಯಲು ಕಾರ್ಯಕ್ರಮಗಳಡಿ ಜನಮಾನಸದಲ್ಲಿ ವೈಜ್ಞಾನಿಕ ಮನೋಭಾವ -ಪ್ರವೃತ್ತಿ ಬೆಳೆಸುವಲ್ಲಿ ಯತ್ನಿಸಿದವರು. ಖ್ಯಾತ ವಿಚಾರವಾದಿ, ಭಾರತೀಯ ವಿಚಾರವಾದಿ ಒಕ್ಕೂಟ ಸಂಘದ ಅಧ್ಯಕ್ಷರು. ದಕ್ಷಿಣ ಕನ್ನಡ ವಿಚಾರವಾದಿಗಳ ಸಂಘದ (1976) ಸಂಸ್ಥಾಪಕರು. 2011 ರಲ್ಲಿ ‘ಏಡ್ ವಿಥೌಟ್ ರಿಲಿಜನ್’ ಎಂಬ ಸ್ವಯಂ ಸೇವಾ ಸಂಸ್ಥೆಯ ಸ್ಥಾಪಕರು. ದೇವರ ಹೆಸರಿನಲ್ಲಿ ನಡೆಯುವ ಶೋಷಣೆಯನ್ನು, ದೇವಮಾನವರೆಂದು ಹೇಳಿಕೊಳ್ಳುವವರ ವಿರುದ್ಧ ದೇಶ-ವಿದೇಶಿಗಳಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ಹೋರಾಟಗಳನ್ನು ಕೈಗೊಂಡರು. ಒಂಬತ್ತು ಭಾಷೆಗಳಲ್ಲಿ ಪ್ರವೀಣರು. 

ಸಾಲ ತೀರಿಸಲು ಲಾಟರಿ ಖರೀದಿಸಲು ಜ್ಯೋತಿಷ್ಯರೊಬ್ಬರು ಇವರ ತಂದೆಗೆ ಹೇಳಿದ್ದರು. ಇಷ್ಟೊಂದು ವಿಶ್ವಾಸದಿಂದ ಅದು ಹೇಗೆ ಹೇಳುತ್ತಾರೆ ಎಂಬ ಕುತೂಹಲವೇ ‘ಅತಿ ಮಾನವರೆಂದು ಹೇಳುವವರ ವರ್ತನೆಗಳನ್ನು ಸಂಶಯದಿಂದ ನೋಡುವಂತೆ ಮತ್ತು ಅವರಿಗೆ ಸವಾಲು ಎಸೆಯುವಂತೆ  ಪ್ರೇರೇಪಿಸಿತ್ತು. ಇದೇ ಮನೋಭಾವವೇ ಪವಾಡ ಬಯಲು ಕಾರ್ಯಕ್ರಮಕ್ಕೆ ಬಲ ನೀಡಿತ್ತು. ಮೂಢನಂಬಿಕೆಯಿಂದ ಸ್ವಂತಹ ಮಗಳನ್ನೇ ಬಲಿ ನೀಡಿದ ಗುಲಬರ್ಗಾ ಜಿಲ್ಲೆಯ (2004) ಘಟನೆಯು ಸಹ ತಮ್ಮ ಜೀವನವನ್ನು ಮೌಢ್ಯು ವಿರೋಧತನಕ್ಕೆ ಮೀಸಲಿಡಲು ಪ್ರೇರೇಪಿಸಿತು. 

25  ಪ್ರಶ್ನೆಗಳಿಗೆ  ಸರಿ ಉತ್ತರ ನೀಡಿದ ಭವಿಷ್ಯಕಾರರಿಗೆ (2009) 1 ಲಕ್ಷ ರೂ. ನೀಡುವುದಾಗಿ ಘೋಷಿಸಿದರು. 450 ಭವಿಷ್ಯಕಾರರು ಸವಾಲು ಸ್ವೀಕರಿಸುವುದಶಾಗಿ ಹೇಳಿದ್ದರೂ ನಿಗದಿತ ದಿನದಂದು ಯಾರೂ ಉಪಸ್ಥಿತರಿರಲಿಲ್ಲ. 2013 ರಲ್ಲಿ ನಡೆದ ಕರ್ನಾಟಕ ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಯಾರು ಯಾರು ಗೆಲ್ಲುತ್ತಾರೆ ಎಂದು ಖಚಿತ ಭವಿಷ್ಯ ನುಡಿಯುವವರಿಗೂ ಇದೇ ರೀತಿಯ ಬಹುಮಾನ ಘೋಷಿಸಿದ್ದು, ಆಗಲೂ ಯಾವ ಭವಿಷ್ಯಕಾರರು ಉತ್ತರಿಸಿರಲಿಲ್ಲ. 

ಪ್ರಶಸ್ತಿ-ಗೌರವಗಳು: ಇಂಟರ್ ನ್ಯಾಷನಲ್ ಹ್ಯೂಮ್ಯಾನಿಸ್ಟ್ ಅಂಡ್ ಎಥಿಕಲ್ ಯೂನಿಯನ್ ನಿಂದ ಮಾನವೀಯ ಸೇವೆಗಳಿಗಾಗಿ (2011) ವಿಶಿಷ್ಟ ಸೇವಾ ಪ್ರಶಸ್ತಿ, ಫ್ರೆಂಡ್ಸ್ ಆಫ್ ಲಾಯಿರಿ ವತಿಯಿಂದ  (2015) ಲಾರೆನ್ಸ್ ಪಿಂಟೋ ಹ್ಯೂಮನ್ ರೈಟ್ಸ್ ಅವಾರ್ಡ್’ ಲಭಿಸಿದೆ.   

 

ನರೇಂದ್ರ ನಾಯಕ್