ಪವಾಡಗಳ ರಹಸ್ಯ ಬಯಲು

Author : ನರೇಂದ್ರ ನಾಯಕ್

Pages 36

₹ 27.00




Year of Publication: 2015
Published by: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು
Address: ಬೆಂಗಳೂರು

Synopsys

ಪ್ರೊ. ನರೇಂದ್ರ ನಾಯಕ್ ಅವರು ಖ್ಯಾತ ವಿಚಾರವಾದಿ. ಮೂಢನಂಬಿಕೆ ವಿರುದ್ಧ ತಮ್ಮ ಪವಾಡಗಳ ಬಯಲು ಕಾರ್ಯಕ್ರಮಗಳ ಮೂಲಕ ವಿನೂತನ ಚಳವಳಿಯನ್ನೇ ಆರಂಭಿಸಿದವರು. ಆ ಮೂಲಕ ಜನ ಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವನೆಯ ಬೀಜ ಬಿತ್ತುವಲ್ಲಿ ಶ್ರಮಿಸಿದವರು. ಧರ್ಮದ ಹೆಸರಿನಲ್ಲಿ ನಡೆಯುವ ಶೋಷಣೆಯನ್ನು, ಢೋಂಗಿಗಳ ಪವಾಡಗಳ ರಹಸ್ಯ ಬಯಲಿಗೆಳೆದು, ಜನರಲ್ಲಿ ಜಾಗೃತಿ ಮೂಡಿಸಿದರು. ಇಂತಹ ತಮ್ಮ ಅನುಭವಗಳ ಹಿನ್ನೆಲೆಯಲ್ಲಿ ಕ್ರೋಢಿಕರಿಸಿದ ಜ್ಞಾನದ ಸಂಗ್ರಹವೇ ಈ ಕೃತಿ. ಪವಾಡಗಳ ಹೆಸರಿನಲ್ಲಿ ಕೆಲವು ದುಷ್ಕರ್ಮಿಗಳು ಹೇಗೆ ಜನರನ್ನು ಶೋಷಿಸುತ್ತಾರೆ ಎಂಬುದನ್ನು ಈ ಕೃತಿಯಲ್ಲಿ ತೋರಿಸಿದ್ದಾರೆ.

About the Author

ನರೇಂದ್ರ ನಾಯಕ್

ನರೇಂದ್ರ ನಾಯಕ್ ಅವರು ಮಂಗಳೂರಿನ ಕಸ್ತೂರ ಬಾ ವೈದ್ಯಕೀಯ ಕಾಲೇಜಿನ ಬಯೋಕೆಮಿಸ್ಟ್ರಿ ವಿಭಾಗದ ನಿವೃತ್ತ (2006) ಪ್ರಾಧ್ಯಾಪಕರು. ಮೂಲತಃ ಮಂಗಳೂರಿನವರು. ಪವಾಡ ಬಯಲು ಕಾರ್ಯಕ್ರಮಗಳಡಿ ಜನಮಾನಸದಲ್ಲಿ ವೈಜ್ಞಾನಿಕ ಮನೋಭಾವ -ಪ್ರವೃತ್ತಿ ಬೆಳೆಸುವಲ್ಲಿ ಯತ್ನಿಸಿದವರು. ಖ್ಯಾತ ವಿಚಾರವಾದಿ, ಭಾರತೀಯ ವಿಚಾರವಾದಿ ಒಕ್ಕೂಟ ಸಂಘದ ಅಧ್ಯಕ್ಷರು. ದಕ್ಷಿಣ ಕನ್ನಡ ವಿಚಾರವಾದಿಗಳ ಸಂಘದ (1976) ಸಂಸ್ಥಾಪಕರು. 2011 ರಲ್ಲಿ ‘ಏಡ್ ವಿಥೌಟ್ ರಿಲಿಜನ್’ ಎಂಬ ಸ್ವಯಂ ಸೇವಾ ಸಂಸ್ಥೆಯ ಸ್ಥಾಪಕರು. ದೇವರ ಹೆಸರಿನಲ್ಲಿ ನಡೆಯುವ ಶೋಷಣೆಯನ್ನು, ದೇವಮಾನವರೆಂದು ಹೇಳಿಕೊಳ್ಳುವವರ ವಿರುದ್ಧ ದೇಶ-ವಿದೇಶಿಗಳಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ಹೋರಾಟಗಳನ್ನು ಕೈಗೊಂಡರು. ಒಂಬತ್ತು ಭಾಷೆಗಳಲ್ಲಿ ಪ್ರವೀಣರು.  ಸಾಲ ...

READ MORE

Related Books