About the Author

ಪತ್ರಕರ್ತ, ಲೇಖಕ ನವೀನ್ ಸೂರಿಂಜೆ ಮೂಲತಃ ದಕ್ಷಿಣ ಕನ್ನಡದವರು. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಉಷಾ ಕಿರಣ, ಕರಾವಳಿ ಅಲೆ, ಕಸ್ತೂರಿ ನ್ಯೂಸ್ 24@7 ನಲ್ಲಿ ಕೆಲಸ ಮಾಡುತ್ತ. ನಂತರ ಬೆಂಗಳೂರಿಗೆ ಬಂದ ನವೀನ್ ಸೂರಿಂಜೆ ಸಧ್ಯ ಬಿಟಿವಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಷಾಕಿರಣ ಮತ್ತು ಕರಾವಳಿ ಅಲೆ ಪತ್ರಿಕೆಯ ಸುರತ್ಕಲ್ ವಿಭಾಗದ ಬಿಡಿ ವರದಿಗಾರರಾಗಿ ಕೆಲಸ ಮಾಡಿರುವ ನವೀನ್ ಪರಿಸರ ಪರವಾದ ಸುದ್ದಿಗಳು, ಮಾನವತೆಯ ವಿರುದ್ಧದ ನಿಲುವುಗಳಿರೋ ಸಂಘಟನೆಗಳ ವಿರುದ್ಧದ ಸುದ್ದಿಗಳ ಮೂಲಕ ಸುದ್ದಿಯಾದರು. ಕೋಮುಸೂಕ್ಷ್ಮ ಪ್ರದೇಶವಾಗಿರುವ ಸುರತ್ಕಲ್‍ನಲ್ಲಿ ನಡೆದ ಕೋಮುಗಲಭೆಗಳ ಸಚಿತ್ರ ವರದಿ ಮಾಡಿದರು. ಬಿಡಿ ವರದಿಗಾರರಾಗಿದ್ದಾಗಲೇ ಅವರು ಮಾಡಿದ ಸುದ್ದಿಗಳು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು.

ನವೀನ್ ಸೂರಿಂಜೆಯವರ ಆಸಕ್ತಿಯ ಕ್ಷೇತ್ರ ಮಕ್ಕಳು ಮತ್ತು ಮಕ್ಕಳ ಹಕ್ಕುಗಳು. ಮಕ್ಕಳ ಮಾರಾಟ ಜಾಲದ ಬಗ್ಗೆ ಅಪಾರ ಕೆಲಸವನ್ನು ಮಾಡಿರುವ ನವೀನ್ ಸೂರಿಂಜೆ, ಸುಮಾರು ನೂರಕ್ಕೂ ಹೆಚ್ಚು ಮಕ್ಕಳನ್ನು ಪ್ರಾಣಾಪಾಯ/ಮಾರಾಟ/ಜೀತದಿಂದ ಮುಕ್ತಗೊಳಿಸಿದ್ದಾರೆ. ಪತ್ರಿಕಾ ರಂಗದಲ್ಲಿ ಸಧ್ಯ ಕ್ರೀಯಾಶೀಲವಾಗಿರುವ ಸಂಘಟನೆಗಳು ಆಡಳಿತಗಾರರ ಪರ ಇರುವ ಹಿನ್ನೆಲೆಯಲ್ಲಿ ಪ್ರಗತಿಪರ ಪತ್ರಕರ್ತರೆಲ್ಲಾ ಸೇರಿಕೊಂಡು ಪತ್ರಕರ್ತರ ಅಧ್ಯಯನ ಕೇಂದ್ರ ಪ್ರಾರಂಭಿಸಿದರು. ಅದರ ಸ್ಥಾಪಕರಲ್ಲಿ ನವೀನ್ ಸೂರಿಂಜೆ ಕೂಡಾ ಒಬ್ಬರು. ಸಧ್ಯ ವರದಿಗಾರರಾಗಿರುವ ನವೀನ್ ಸೂರಿಂಜೆಯವರ ಲೇಖನಗಳು ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ನವೀನ್ ಸೂರಿಂಜೆ, ಕರ್ನಾಟಕ ಹಲವು ಪ್ರಗತಿಪರ ಚಳುವಳಿಗಳ ಭಾಗವಾಗಿದ್ದಾರೆ.

ಕೃತಿಗಳು : 
1) ನೇತ್ರಾವತಿಯಲ್ಲಿ ನೆತ್ತರು
2) ಸದನದಲ್ಲಿ ಶ್ರೀರಾಮ ರೆಡ್ಡಿ
3) ಕುತ್ಲೂರು ಕಥನ
4) ನಡುಬಗ್ಗಿಸದ ಎದೆಯ ದನಿ

ಇವರ 'ಕುತ್ಲೂರು ಕಥನ' ಪುಸ್ತಕವು ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ಮನ್ಸೋರೆಯವರ ನಿರ್ದೇಶನದಲ್ಲಿ 19.20.21 ಹೆಸರಿನಲ್ಲಿ ಸಿನಿಮವಾಗಿದೆ. 

ನವೀನ್ ಸೂರಿಂಜೆ