About the Author

ಲೇಖಕ ನಿಂಗಪ್ಪ ಎಂ. ಅಂಗಡಿ ಅವರು ಕಲಾವಿದರು. ಮೂಲತಃ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಚಿಕ್ಕಮಗಿ ಗ್ರಾಮದವರು. ಆರ್ಟ್ ಮಾಸ್ಟರ್ ಡಿಪ್ಲೊ, ಜಿ.ಡಿ. ಆರ್ಟ್, ಕರ್ನಾಟಕ ವಿವಿಯಿಂದ ಬಿಎಫ್ ಎ ಹಾಗೂ ಎಂಎಫ್ ಎ ಪದವಿ ಪಡೆದರು. ‘ಗ್ಲಾಸ್ ಪೇಂಟಿಗ್ಸ್ ಆಫ್ ಕರ್ನಾಟಕ: ಎ ಸ್ಟಡಿ’  ವಿಷಯವಾಗಿ ಹಂಪಿಯ ಕನ್ನಡ ವಿ.ವಿ.ಗೆ ಸಲ್ಲಿಸಿದ ಇವರ ಸಂಶೋಧನಾ ಮಹಾಪ್ರಬಂಧ.

ಮೈಸೂರು, ಬೆಂಗಳೂರು ಹಾಗೂ ಧಾರವಾಡಗಳಲ್ಲಿ ಇವರು ತಮ್ಮ ಕಲಾಕೃತಿಗಳ ಪ್ರದರ್ಶನ ಮಾಡಿದ್ದಾರೆ. ಲಕ್ನೋ, ಪಣಜಿ, ದೆಹಲಿ, ಕೇರಳ ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳಲ್ಲಿ ಸಾಂಊಹಿಕವಾಗಿ ಇವರ ಕಲಾಕೃತಿಗಳು ಪ್ರದರ್ಶನಗೊಂಡಿವೆ. ದೇಶದಾದ್ಯಂಥ ನಡೆದ ಕಲಾಮೇಳ, ಚಿತ್ರಕಲಾಕೃತಿಗಳ ಮೇಳ, ಶಿಬಿರಗಳಲ್ಲೂ ಭಾಗಿಯಾಗಿದ್ದಾರೆ. ಕರ್ನಾಟಕ ಲಲತ ಕಲಾ ಅಕಾಡೆಮಿ ಆಯೋಜಿಸಿದ ಸಮಾರಂಭಗಳಲ್ಲಿ ಇವರ ಕಲಾಕೃತಿಗಳು ಪ್ರದರ್ಶಗೊಂಡಿದ್ದು, ಅಲ್ಲಿಯ ಆಸಕ್ತರಿಗೆ ಕಲೆಗಳ ಕುರಿತು ಉಪನ್ಯಾಸ ನೀಡಿದ್ದಾರೆ.

ಅಖಿಲ ಕರ್ನಾಟಕ ಪ್ರಥಮ ದೃಶ್ಯ ಕಲಾ ಸಾಹಿತ್ಯ ಪ್ರಥಮ ಸಮ್ಮೇಳನ ಸೇರಿದಂತೆ ಚಿತ್ರಕಲೆಗೆ ಸಂಬಂಧಿಸಿದ ವಿವಿಧ ಪ್ರತಿಷ್ಠಿತ ವೇದಿಕೆಯಲ್ಲಿ  ತಮ್ಮ ವಿಚಾರಗಳನ್ನು ಮಂಡಿಸಿದ್ದಾರೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದಾರೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯ ಹಾಗೂ  ಗುಲಬರ್ಗಾ ವಿಶ್ವವಿದ್ಯಾಲಯ ವ್ಯಾಪ್ತಿಯ ಫೈನ್ ಆರ್ಟ್ಸ ಅಭ್ಯಾಸ ಮಂಡಳಿ ಸದಸ್ಯರೂ ಆಗಿದ್ದಾರೆ. ಸದ್ಯ, ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಬನಶಂಕರಿಯಲ್ಲಿ ಶಿಲ್ಪ ಹಾಗೂ ಪೇಂಟಿಂಗ್ಸ್ ವಿಭಾಗದಲ್ಲಿ ಅತಿಥಿ  ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದ್ದಾರೆ.   . 

ಕೃತಿಗಳು: ಕಲಾಸ್ವಾದನೆ: ಆಧುನಿಕ ದೃಷ್ಟಿ (ಕಲೆಗೆ ಸಂಬಂಧಿಸಿದ ಸಂಶೋಧನಾತ್ಮಕ ಲೇಖನಗಳು)

ನಿಂಗಪ್ಪ ಎಂ. ಅಂಗಡಿ