About the Author

ನಿರಂಜನ ವಾನಳ್ಳಿ ಹುಟ್ಟಿದ್ದು(1965) ಉತ್ತರ ಕನ್ನಡ ಜಿಲ್ಲೆಯ 'ವಾನಳ್ಳಿ'ಯಲ್ಲಿ. ಮೈಸೂರಿನ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಪ್ರೌಢ ಶಿಕ್ಷಣ ಪೂರ್ಣಗೊಳಿಸಿದರು.

ಕವಿ, ವಿಮರ್ಶಕ, ಸಂಶೋಧಕ, ನುಡಿಚಿತ್ರಕಾರ, ಅಂಕಣಕಾರ, ಫ್ರೀಲಾನ್ಸ್ ಪತ್ರಕರ್ತ. ಪ್ರಾಧ್ಯಾಪಕ. ಸದಾ ಒಂದಲ್ಲೊಂದು ಪತ್ರಿಕೆ, ನಿಯತಕಾಲಿಕಗಳಲ್ಲಿ ವೈವಿಧ್ಯಮಯ ಬರಹಗಳನ್ನು ಪ್ರಕಟಿಸುತ್ತಿದ್ದರು.  ದ.ಕ.ಜಿಲ್ಲೆಯ ಉಜಿರೆಯ ಎಸ್.ಡಿ.ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಗಿದ್ದರು. ಪ್ರಸ್ತುತ ಸಂಗೀತ ವಿಶ್ವವಿದ್ಯಾನಿಲಯದ ಕುಲಸಚಿವರು. 

ನಿಯತಕಾಲಿಕ ಪತ್ರಿಕೋದ್ಯಮ, ಪರಿಸರ ಪತ್ರಿಕೋದ್ಯಮ, ಎಲ್ಲರಿಗೂ ಬೇಕು ಸಂವಹನದ ಕಲೆ, ಪತ್ರಿಕಾ ಮಂಡಳಿ ಏನು? ಎತ್ತ? ಸೇರಿದಂತೆ 'ಒಂದು ಅಡಿ ಭೂಮಿ, ಬೊಗಸೆ ತುಂಬ ಪ್ರೀತಿ-ಕವನ ಸಂಕಲನ' ಇದು 31 ನೇ ಕೃತಿ. ಕಂಡಿದ್ದು ಕಾಡಿದ್ದು-ಇವರ ಅಂಕಣ ಬರೆಹ. ಪ್ರೀತಿಗೆಷ್ಟು ಮುಖಗಳು, ಹುಡುಕಾಟದ ಹೊತ್ತು, ಆ ಕ್ಷಣದ ನೋಟ -ಇವು ಪ್ರಬಂಧಗಳು. ‘ಒಮಾನ್ ಎಂಬ ಒಗಟು’-ಪ್ರವಾಸ ಸಾಹಿತ್ಯ, ಕನ್ನಡ ಸಾಹಿತ್ಯ ಪತ್ರಿಕೆಗಳು-ಮಹಾಪ್ರಬಂಧ, ನುಡಿರಂಜನ-ಇವರ ಅಭಿನಂದನ ಗ್ರಂಥ. 

ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ-1993, ಉಗ್ರಾಣ ಪ್ರಶಸ್ತಿ- 2002, ಗೊರೂರು ಪ್ರಶಸ್ತಿ- 2002,,ಕೃಷ್ಣಾನಂದ ಕಾಮತ್ ಪುರಸ್ಕಾರ ಲಭಿಸಿವೆ.

ನಿರಂಜನ ವಾನಳ್ಳಿ

Books about Author