About the Author

ಸದ್ಯ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಅಧ್ಕಕ್ಷ ಹಾಗೂ ಪ್ರಸಾರಾಂಗದ ನಿರ್ದೇಶಕರಾಗಿರುವ ನಿತ್ಯಾನಂದ ಬಿ. ಶೆಟ್ಟಿ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಕೋಟೆಕಾರು ಗ್ರಾಮದ ಬಲ್ಯಬಾಳಿಕೆಯವರು. ಮಂಗಳೂರು ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಎಂ.ಎ. ಹಾಗೂ ಪಿಹೆಚ್.ಡಿ ಪದವಿ ಪಡೆದವರು.
1997ರಲ್ಲಿ ಮೂಡುಬಿದಿರೆಯ ಶ್ರೀ ಮಹಾವೀರ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು 1998ರಿಂದ2008 ರವರೆಗೆ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದರು. ಮಂಗಳೂರಿನ ಮಹೇಶ್ ಕಾಲೇಜಿನ ಸ್ಥಾಪಕ ಪ್ರಾಂಶುಪಾಲರಾಗಿದ್ದ ಅವರು ಎರಡು ವರ್ಷ ಅವಧಿಯಲ್ಲಿ ಕಾಲೇಜನ್ನು ರಾಜ್ಯ ಗುರುತಿಸುವಂತೆ ಮಾಡಿದವರು. ಕರಾವಳಿ ಕರ್ನಾಟಕದ ಕೋಮುವಾದ (ಡಾ. ಎಂ. ಚಂದ್ರ ಪೂಜಾರಿಯವರೊಂದಿಗೆ), ಪರಂಪರೆ-ಆಧುನಿಕತೆ-ಪ್ರತಿಸಂಸ್ಕೃತಿ (ಯು.ಆರ್. ಅನಂತಮೂರ್ತಿ ಪುಸ್ತಕದ ಅನುವಾದ), ಅಳಿಕೆ (ತೆಂಕುತಿಟ್ಟು ಯಕ್ಷಗಾನದ ಮೇರು ಕಲಾವಿದ ಅಳಿಕೆ ರಾಮಯ್ಯ ರೈ ಸ್ಮೃತಿ ಕೃತಿ) ಸ್ವತಂತ್ರ, ಅನುವಾದಿತ ಮತ್ತು ಸಂಪಾದಿತ ಕೃತಿಗಳು. ಭಾರತದ ಹೆಸರಾಂತ ವಿದುಷಿ ಕಪಿಲಾ ವಾತ್ಸಾಯನರ ಬಹುಪ್ರಸಿದ್ಧ ‘ಕಲಾತತ್ತ್ವಕೋಶ’ ಪುಸ್ತಕಗಳ ಮೊದಲ ನಾಲ್ಕು ಸಂಪುಟಗಳ ಕನ್ನಡ ಆವೃತ್ತಿಯ ಸಂಪಾದಕರು. ತುಮಕೂರು ವಿ.ವಿ.ಯ ‘ಲೋಕಜ್ಞಾನ’ ಎಂಬ ಸಾಂಸ್ಕೃತಿಕ ಅಧ್ಯಯನ ಮತ್ತು ಸಂವಾದಗಳ ಸಂಶೋಧನಾ ಪತ್ರಿಕೆಯ ಸಂಪಾದಕರು.

ನಿತ್ಯಾನಂದ ಬಿ. ಶೆಟ್ಟಿ