About the Author

ಮೂಲತಃ ಶಿವಮೊಗ್ಗದವರಾದ ನೂರ್ ಅಹಮದ್ ಎ.ಎಸ್,  1973 ರ ಮೇ 18ರಂದು ಜನಿಸಿದರು. ಶಿವಮೊಗ್ಗದಲ್ಲಿಯೇ ತಮ್ಮ ವಿದ್ಯಾಭ್ಯಾಸ ಮುಗಿಸಿ ಪ್ರಸ್ತುತ ಬೆಂಗಳೂರಿನ ಕಾಲೇಜ್ ಒಂದರಲ್ಲಿ ಆಂಗ್ಲ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಲಂಕೇಶ್ ಪತ್ರಿಕೆ, ಗೌರಿ ಲಂಕೇಶ್, ವಾರ್ತಾಭಾರತಿಯಲ್ಲಿ ಲೇಖನಗಳನ್ನು ಪ್ರಕಟಿಸಿದ್ದಾರೆ. ಮಂಗ್ಳೂರು ವಿಜಯ ಅವರ ಜೊತೆಗೂಡಿ ಮುಸ್ಲಿಂದನಿ ಮಾಸಿಕದಲ್ಲಿ ಕೆಲಸ ಮಾಡುತ್ತಾ ‘ಬರ್ಮಾ ಬಿಕ್ಕಟ್ಟು’ ಮತ್ತು ‘ನಾನು ಅಮಿರ್ ಖಾನ್’ ಭಯೋತ್ಪಾದಕನಲ್ಲ ಎಂಬ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಕೆಲಕಾಲ ದೂರದರ್ಶನಕ್ಕಾಗಿ ದುಡಿದಿದ್ದಾರೆ. ಫೋಟೋಗ್ರಾಫಿ ಯನ್ನು ಹವ್ಯಾಸ ಮಾಡಿಕೊಂಡಿದ್ದು, ಖಾಸಗಿ ಪತ್ರಿಕೆಯೊಂದರಲ್ಲಿ ಅಂಕಣಕಾರರಾಗಿಯೂ ಗುರುತಿಸಿಕೊಂಡಿದ್ದಾರೆ.

ನೂರ್ ಅಹಮದ್ ಎ.ಎಸ್

(18 May 1973)