About the Author

ಡಾ. ಪಿ. ಸದಾನಂದ ಮಯ್ಯ ಅವರು ಮೂಲತಃ ಉಡುಪಿ ಜಿಲ್ಲೆಯ ಪಾರಂಪಳ್ಲಿಯವರು.  ಆಹಾರ ತಿನಿಸುಗಳ ಉದ್ಯಮಿ. ಓದಿದ್ದು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್. ಮಯ್ಯಾಸ್ ಕುರುಕಲು ತಿಂಡಿ ಆಹಾರ ಘಟಕದ ಕಾರ್ಖಾನೆ ಹೊಂದಿದ್ದು, . ಧಿಡೀರ್ ತಿನಿಸುಗಳ ಕ್ಷೇತ್ರದಲ್ಲಿ ಸಾಕಷ್ಟು ಆವಿಷ್ಕಾರ ಮಾಡಿದ್ದಾರೆ. ವಿವಿಧ ಸುವಾಸನೆಯ, ಆಹಾರ ಪದಾರ್ಥಗಳ ಐಸ್ ಕ್ರೀಂ ಗಳನ್ನು ತಯಾರಿಸಿದ್ದಾರೆ. ಎಂ.ಟಿ.ಆರ್ ಬ್ರ್‍ಯಾಂಡ್ ನ ಕುರುಕುಲು ಆಹಾರ ಪದಾರ್ಥಗಳು ಜಗತ್ತಿನೆಲ್ಲೆಡೆ ಪೂರೈಕೆಯಾಗುತ್ತಿವೆ. 

ಕೆನಡಾದ ಕ್ಯೂಬೆಕ್ ನಗರದಲ್ಲಿ ವಿಚಾರ ಸಂಕಿರಣದಲ್ಲಿ ಫುಡ್ ಪ್ಯಾಕೇಜಿಂಗ್ ನಲ್ಲಿ ನ್ಯಾನೋ ತಂತ್ರಜ್ಙನ ಬಳಕೆ’ ಕುರಿತು ಸಂಶೋಧನಾ ಪ್ರಬಂಧ ಮಂಡಿಸಿದ್ದಾರೆ. ಕೇಂದ್ರ (2001) ರಕ್ಷಣಾ ಇಲಾಖೆಯಿಂದ ಪ್ರಶಸ್ತಿ, ಬಿಜಿನೆಸ್ ಟು ಡೆ ಯಿಂದ ಬೆಸ್ಟ್ ಮಾರ್ಕೆಟರ್ (2003) ಪ್ರಶಸ್ತಿ, ವಿ. ಸುಬ್ರಮಣ್ಯಂ (2002) ಕೈಗಾರಿಕಾ ಪ್ರಶಸ್ತಿ, ಸುವರ್ಣ (2006) ಕರ್ನಾಟಕ ಪ್ರಶಸ್ತಿ, ಅಖಿಲ ಭಾರತ ಆಹಾರ ಸಂಸ್ಕರಣೆ ಸಂಸ್ಥೆಯಿಂದ ಜೀವಮಾನ ಸಾಧನೆ ಪ್ರಶಸ್ತಿ, 2010 ರಲ್ಲಿ ಆರ್ಯಭಟ ಪುರಸ್ಕಾರ, ತುಮಕೂರು ವಿ.ವಿ.ಯಿಂದ ಗೌರವ ಡಾಕ್ಟರೇಟ್ ಪ್ರದಾನ ಇತ್ಯಾದಿ ಗೌರವ ಪ್ರಶಸ್ತಿಗಳು ಸಂದಿವೆ. 

ಕೃತಿಗಳು: ಆಹಾರ ವಿಹಾರ ಭಾಗ-2. 

ಪಿ. ಸದಾನಂದ ಮಯ್ಯ