ಆಹಾರ ವಿಹಾರ ಭಾಗ-2

Author : ಪಿ. ಸದಾನಂದ ಮಯ್ಯ

Pages 168

₹ 135.00




Year of Publication: 2011
Published by: ಸಾಹಿತ್ಯ ಪ್ರಕಾಶನ,
Address: ಕೊಪ್ಪಿಕರ್ ರಸ್ತೆ, ಹುಬ್ಬಳ್ಳಿ

Synopsys

ಆಹಾರ ತಯಾರಿಕೆ ಕ್ಷೇತ್ರದ ಉದ್ಯಮಿ ಹಾಗೂ ಲೇಖಕ ಡಾ. ಪಿ. ಸದಾನಂದ ಮಯ್ಯ ಅವರ ಕೃತಿ-ಆಹಾರ ವಿಹಾರ ಭಾಗ-2. ಕೃತಿಗೆ ಮುನ್ನುಡಿ ಬರೆದ ಪ್ರೊ. ಕೆ.ಎಸ್. ನಾರಾಯಣಾಚಾರ್ಯ ಅವರು ‘ಆಹಾರ ವಿಹಾರ ಕುರಿತು ವಿಜಯಕರ್ನಾಟಕ ಪತ್ರಿಕೆಯಲ್ಲಿ ಡಾ. ಪಿ. ಸಾದಾನಂದ ಮಯ್ಯ ಅವರು ತಮ್ಮ ಅಂಕಣದಲ್ಲಿ ಬರೆಯುತ್ತಿದ್ದಾಗ ‘ಅವರು ಏನು ಬರೆಯುತ್ತಾರೆ? ಆಹಾರ ಹೇಗೆ ವಿಹಾರ? ಎಂದು ಮತ್ತು ಇದು ಬರೀ ಶಬ್ದಾಡಂಬರವೋ, ವೈವಿಧ್ಯಮಯ, ರುಚಿ, ಚೊಕ್ಕತನ  ಇಲ್ಲೂ ಪಾಕ ಪ್ರಪಂಚದ ಅರಿವು ಇರಲು ಸಾಧ್ಯವೆ? ಎಂದು ಶಂಕಿಸಿದ್ದವರಲ್ಲಿ ನಾನೂ ಒಬ್ಬ. ಒಬ್ಬನೇನು? ಮುಖ್ಯ ಎಂದರೂ ಸರಿ. ತಪ್ಪು ಒಪ್ಪಿಕೊಳ್ಳಲು ನನಗೆ ಸಂಕೋಚವಿಲ್ಲ’ ಎನ್ನುವ ಮೂಲಕ ಇಲ್ಲಿಯ ಬರಹಗಳ ಸ್ವರೂಪ ಹಾಗೂ ವಿಷಯದ ಆಳವನ್ನು ಪ್ರಶಂಸಿಸಿದ್ದಾರೆ.

ಪತ್ರಕರ್ತ ವಿಶ್ವೇಶ್ವರ ಭಟ್ ಕೃತಿಗೆ ಬೆನ್ನುಡಿ ಬರೆದು ‘ಆಹಾರ ತಯಾರಿಕೆಯಲ್ಲಿ ಏನೆಲ್ಲ ಮಾಡಬಹುದೋ ಅದೆಲ್ಲವನ್ನೂ ಮಯ್ಯ ಮಾಡಿದ್ದಾರೆ. ಇದೊಂದನ್ನು ನೀವು ಮಾಡಿಲ್ಲ ಅಂತ ಅವರಿಗೆ ಹೇಳುವಂತಿಲ್ಲ. ಅಡುಗೆ ಮನೆಯಲ್ಲೊಂದು ಕ್ರಾಂತಿಯನ್ನೇ ಮಾಡಿದ್ದಾರೆ’ ಇಲ್ಲಿಯ ಅಂಕಣ ಬರಹಗಳ ರುಚಿ ಓದಿಯೇ ಸವಿಯಬೇಕು’ ಎಂದು ಅಭಿಪ್ರಾಯಪಟ್ಟಿದ್ದಾರೆ.

About the Author

ಪಿ. ಸದಾನಂದ ಮಯ್ಯ

ಡಾ. ಪಿ. ಸದಾನಂದ ಮಯ್ಯ ಅವರು ಮೂಲತಃ ಉಡುಪಿ ಜಿಲ್ಲೆಯ ಪಾರಂಪಳ್ಲಿಯವರು.  ಆಹಾರ ತಿನಿಸುಗಳ ಉದ್ಯಮಿ. ಓದಿದ್ದು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್. ಮಯ್ಯಾಸ್ ಕುರುಕಲು ತಿಂಡಿ ಆಹಾರ ಘಟಕದ ಕಾರ್ಖಾನೆ ಹೊಂದಿದ್ದು, . ಧಿಡೀರ್ ತಿನಿಸುಗಳ ಕ್ಷೇತ್ರದಲ್ಲಿ ಸಾಕಷ್ಟು ಆವಿಷ್ಕಾರ ಮಾಡಿದ್ದಾರೆ. ವಿವಿಧ ಸುವಾಸನೆಯ, ಆಹಾರ ಪದಾರ್ಥಗಳ ಐಸ್ ಕ್ರೀಂ ಗಳನ್ನು ತಯಾರಿಸಿದ್ದಾರೆ. ಎಂ.ಟಿ.ಆರ್ ಬ್ರ್‍ಯಾಂಡ್ ನ ಕುರುಕುಲು ಆಹಾರ ಪದಾರ್ಥಗಳು ಜಗತ್ತಿನೆಲ್ಲೆಡೆ ಪೂರೈಕೆಯಾಗುತ್ತಿವೆ.  ಕೆನಡಾದ ಕ್ಯೂಬೆಕ್ ನಗರದಲ್ಲಿ ವಿಚಾರ ಸಂಕಿರಣದಲ್ಲಿ ಫುಡ್ ಪ್ಯಾಕೇಜಿಂಗ್ ನಲ್ಲಿ ನ್ಯಾನೋ ತಂತ್ರಜ್ಙನ ಬಳಕೆ’ ಕುರಿತು ಸಂಶೋಧನಾ ಪ್ರಬಂಧ ಮಂಡಿಸಿದ್ದಾರೆ. ಕೇಂದ್ರ (2001) ರಕ್ಷಣಾ ಇಲಾಖೆಯಿಂದ ಪ್ರಶಸ್ತಿ, ಬಿಜಿನೆಸ್ ಟು ಡೆ ...

READ MORE

Related Books