About the Author

ಕರ್ನಾಟಕದ ಪ್ರಸಿದ್ಧ ಪ್ರಸೂತಿ ತಜ್ಞೆ ಪದ್ಮಿನಿ ಪ್ರಸಾದ್ ವೈದ್ಯಕೀಯ ಸಾಹಿತ್ಯದಲ್ಲೂ ಹೆಸರು ಮಾಡಿದ್ದಾರೆ. ಕನ್ನಡ ವಾಹಿನಿಗಳಲ್ಲಿ ಆರೋಗ್ಯ ಮಾಹಿತಿಯ ಕುರಿತು ಕಾರ್ಯಕ್ರಮ ನೀಡುವ ಇವರು ಕನ್ನಡ ಜನರಿಗೆ ಚಿರಪರಿಚಿತರು. 1952 ಅಕ್ಟೋಬರ್ 17 ತುಮಕೂರಿನಲ್ಲಿ ಹುಟ್ಟಿದರು. ವೃತ್ತಿಯಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಮತ್ತು ಲೈಂಗಿಕ ಶಾಸ್ತ್ರಜ್ಞೆ. “ಸ್ತ್ರೀ ಲೈಂಗಿಕ ವಿಜ್ಞಾನ, ಲೈಂಗಿಕ ಆರೋಗ್ಯ, ಲೈಂಗಿಕ ಸಾಮರಸ್ಯ, ಲೈಂಗಿಕ ದೀಪ್ತಿ, Marriage guidance for "To Be married" and "Newly Married” ಮುಂತಾದ ವೈದ್ಯಕೀಯ ಸಾಹಿತ್ಯವನ್ನು ಜನರಿಗೆ ನೀಡಿದ್ದಾರೆ. ಅಮೆರಿಕಾದ ಪ್ರತಿಷ್ಠಿತ ವಿಶ್ವ ಲೈಂಗಿಕ ಆರೋಗ್ಯ ಸಂಸ್ಥೆಯ ಸದಸ್ಯತ್ವ ದೊರೆತಿದೆ. ಅವರ ಸೇವೆಯನ್ನು ಗುರುತಿಸಿ “ಬೆಂಗಳೂರು ಮಹಾನಗರ ಪಾಲಿಕೆಯಿಂದ  ಕೆಂಪೇಗೌಡ ಪ್ರಶಸ್ತಿ, ಡಾ. ಎಸ್. ಶಂಕರ್‌ ಶ್ರೇಷ್ಠ ವೈದ್ಯ ಸಾಹಿತ್ಯ ಪ್ರಶಸ್ತಿ, Council of sex Education and parenthood Intenational Fellowship, ಎಂ.ಡಿ (ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ) ಮೊದಲ ರ್‍ಯಾಂಕ್‌ನೊಂದಿಗೆ ಚಿನ್ನದ ಪದಕ, ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ, ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯಿಂದ ಡಾ. ಅಂಬೇಡ್ಕರ್‌ ಫೆಲೋಶಿಪ್” ಪ್ರಶಸ್ತಿಗಳು ಲಭಿಸಿವೆ. 

ಪದ್ಮಿನಿ ಪ್ರಸಾದ್

(17 Oct 1952)