About the Author

ಡಾ.ಪ್ರಭು ಅ. ಗಂಜಿಹಾಳ ಅವರು ಮೂಲತಃ ಬಾಗಲಕೋಟ ಜಿಲ್ಲೆ ಹುನಗುಂದ ತಾಲೂಕಿನ ಗುಡೂರು ಗ್ರಾಮದವರು. ಗದಗ ಜಿಲ್ಲೆಯ ಹೊಳೆಆಲೂರ ಎಸ್.ಕೆ.ವಿ.ಪಿ ಕಲಾ,ವಿಜ್ಞಾನ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ 1991 ರಿಂದ ಉಪನ್ಯಾಸಕರಾಗಿ ಸೇವೆ, ಸದ್ಯ, ಕನ್ನಡ ವಿಭಾಗದ ಮುಖ್ಯಸ್ಥರು. ಕನ್ನಡ ವೃತ್ತಿ ರಂಗಭೂಮಿ ಚಲನಚಿತ್ರರಂಗ ವಿಷಯವಾಗಿ (2004) ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವೀಧರರು. 

ಹಲವಾರು ಭಕ್ತಿಗೀತೆಗಳ ಧ್ವನಿಸುರುಳಿಗೆ ಸಾಹಿತ್ಯ ರಚನೆ. ಚಲನಚಿತ್ರ, ಕಿರುಚಿತ್ರ, ಆಲ್ಬಂ ಸಾಂಗ್,ಧಾರಾವಾಹಿಗಳಿಗೆ ಸಹನಿರ್ದೇಶನ, ಪತ್ರಿಕಾ ಸಂಪರ್ಕ, ಪ್ರಚಾರ ಕಲೆ ಜೊತೆಗೆ ಹಲವಾರು ಚಲನಚಿತ್ರಗಳಲ್ಲಿ ಅಭಿನಯ. ಕ.ವಿ.ವಿ ಯ ಬಿ.ಎ,ಬಿ.ಬಿ.ಎ ತರಗತಿಗಳಿಗೆ ಪಠ್ಯ ಪುಸ್ತಕ ಸಂಪಾದಕರು. 

ಪ್ರಭು ಅ ಗಂಜಿಹಾಳ