ನಮ್ಮ ಕನ್ನಡ ಶಾಲೆ (ಮಕ್ಕಳ ಪದ್ಯಗಳು )

Author : ಪ್ರಭು ಅ ಗಂಜಿಹಾಳ

Pages 120

₹ 150.00
Year of Publication: 2020
Published by: ಚಿಲಿಪಿಲಿ ಪ್ರಕಾಶನ
Address: ಸುಭಾಸ ರೋಡ ಧಾರವಾಡ
Phone: 9945176766

Synopsys

ಡಾ.ಪ್ರಭು ಅ ಗಂಜಿಹಾಳ ಸ್ವತಂತ್ರವಾಗಿ ರಚಿಸಿದ ಕೃತಿ-ನಮ್ಮ ಕನ್ನಡ ಶಾಲೆ. ಮಕ್ಕಳಿಗಾಗೇ ಬರೆದ 70 ಪದ್ಯಗಳಿವೆ. ಬಾಲ್ಯದ ನೆನಪು ಮತ್ತೊಮ್ಮೆ ಪದ್ಯಗಳ ಮೂಲಕ ನೆನಪಿಗೆ ತರುವಂತಿವೆ. ಮಕ್ಕಳ ಗ್ರಹಿಕೆಯ ಸಾಮರ್ಥ್ಯಕ್ಕೆ ಇಳಿದು ಬರೆದ ಕವಿತೆಗಳು ಮಕ್ಕಳಿಗೆ ಮುದ ನೀಡುತ್ತವೆ. 

About the Author

ಪ್ರಭು ಅ ಗಂಜಿಹಾಳ

ಡಾ.ಪ್ರಭು ಅ. ಗಂಜಿಹಾಳ ಅವರು ಮೂಲತಃ ಬಾಗಲಕೋಟ ಜಿಲ್ಲೆ ಹುನಗುಂದ ತಾಲೂಕಿನ ಗುಡೂರು ಗ್ರಾಮದವರು. ಗದಗ ಜಿಲ್ಲೆಯ ಹೊಳೆಆಲೂರ ಎಸ್.ಕೆ.ವಿ.ಪಿ ಕಲಾ,ವಿಜ್ಞಾನ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ 1991 ರಿಂದ ಉಪನ್ಯಾಸಕರಾಗಿ ಸೇವೆ, ಸದ್ಯ, ಕನ್ನಡ ವಿಭಾಗದ ಮುಖ್ಯಸ್ಥರು. ಕನ್ನಡ ವೃತ್ತಿ ರಂಗಭೂಮಿ ಚಲನಚಿತ್ರರಂಗ ವಿಷಯವಾಗಿ (2004) ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವೀಧರರು.  ಹಲವಾರು ಭಕ್ತಿಗೀತೆಗಳ ಧ್ವನಿಸುರುಳಿಗೆ ಸಾಹಿತ್ಯ ರಚನೆ. ಚಲನಚಿತ್ರ, ಕಿರುಚಿತ್ರ, ಆಲ್ಬಂ ಸಾಂಗ್,ಧಾರಾವಾಹಿಗಳಿಗೆ ಸಹನಿರ್ದೇಶನ, ಪತ್ರಿಕಾ ಸಂಪರ್ಕ, ಪ್ರಚಾರ ಕಲೆ ಜೊತೆಗೆ ಹಲವಾರು ಚಲನಚಿತ್ರಗಳಲ್ಲಿ ಅಭಿನಯ. ಕ.ವಿ.ವಿ ಯ ಬಿ.ಎ,ಬಿ.ಬಿ.ಎ ತರಗತಿಗಳಿಗೆ ಪಠ್ಯ ಪುಸ್ತಕ ಸಂಪಾದಕರು.  ...

READ MORE

Related Books