About the Author

ಪ್ರಕಾಶ್ ಮಂಟೇದ ಮೂಲತಃ ರಾಮನಗರ ಜಿಲ್ಲೆಯ ಕುಂಭಾಪುರ ಕಾಲೋನಿಯವರು. ಕನ್ನಡದಲ್ಲಿ ಎಂ.ಎ, ಪಿ.ಹೆಚ್‌.ಡಿ  ಪಡೆದಿದ್ದಾರೆ.  ಬೀದಿರಂಗಭೂಮಿ ಹಾಡುಗಾರ, ರಾಮನಗರ ಜನರಂಗ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಬಸುಲಿಂಗಯ್ಯರವರ ಪ್ರಭಾವದಿಂದ ರಂಗಭೂಮಿ ಹಿನ್ನಲೆಗಾಯಕರಾಗಿದ್ದಾರೆ, ಬಂಜಗೆರೆ ಜಯಪ್ರಕಾಶ್ , ಕೆ.ರಾಮಯ್ಯ,  ನಟ್ರಾಜ್ ಹುಳಿಯಾರ್, ಕಿರಂ ಮುಂತಾದ ಸಾಹಿತ್ಯ ಸಾಂಸ್ಕೃತಿಕ ವ್ಯಕ್ತಿತ್ವಗಳ ಪ್ರಭಾವ ಕಾವ್ಯ ಸಾಹಿತ್ಯದ ಗ್ರಹಿಕೆಗಳ ಪ್ರಭಾವ ಪರಿಣಾಮ,  ಕೆ.ವೈ ನಾರಾಯಣಸ್ವಾಮಿ ರವರ ಮಾರ್ಗದರ್ಶನದಲ್ಲಿ ಮಂಟೇಸ್ವಾಮಿ ಕುರಿತ ಅಧ್ಯಯನದ ಮಾರ್ಗದರ್ಶನ ಬಯಲು ಬಳಗದ ಕ್ರಿಯಾಶೀಲನಾದದ್ದು, ಸಂಶೋಧನೆ, ಸಾಹಿತ್ಯ ಮೀಮಾಂಸೆ, ವಿಮರ್ಶೆ ಆಸಕ್ತಿ‌ ಕೇಂದ್ರಗಳು..ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದೊಡ್ಡಬಳ್ಳಾಪುರದಲ್ಲಿ ಸಹ ಪ್ರಾಧ್ಯಾಪಕನಾಗಿ ಕೆಲಸ ನಿರ್ವಹಣೆ ಮಾಡುತಿದ್ದಾರೆ. 

ಕೃತಿಗಳು : ಕಾಮಕಸ್ತೂರಿ ಬನ

 

ಪ್ರಕಾಶ್‌ ಮಂಟೇದ