ಕಾಮಕಸ್ತೂರಿ ಬನ

Author : ಪ್ರಕಾಶ್‌ ಮಂಟೇದ

Pages 132

₹ 150.00




Year of Publication: 2022
Published by: ಕೌದಿ ಪ್ರಕಾಶನ

Synopsys

'ಕಾಮ ಕಸ್ತೂರಿ ಬನ'  ಪ್ರಕಾಶ್‌ ಮಂಟೇದ ಅವರ ಕವನ ಸಂಕಲನವಾಗಿದೆ. ಕವನಗಳಲ್ಲಿಯೂ ಕ್ರಾಂತಿ ಮತ್ತು ಪ್ರೇಮ, ರಮ್ಯ ಕನಸು ಮತ್ತು ಕಟುವಾಸ್ತವಗಳು ಏಕಕಾಲದಲ್ಲಿ ಕಾಣಬಲ್ಲವು. ಎರಡೂ ಲೋಕಗಳ ಕುದಿಯಲ್ಲಿ ಹದಗೊಂಡು-ಜೀವ ಕಂಪನ, ಜೀವ ದಯೆ, ಜೀವಂಕರ್ಷ, ಜೀವ ಸಂಪಿಗೆ, ಜೀವ ಬಂಧನ, ಮುಂತಾದ ಪದಗಳು ಇಡೀ ಸಂಕಲನದುದ್ದಕ್ಕೂ ರೂಪುಗೊಂಡಿವೆ. ಸಮಾನತೆ, ಸೋದರತ್ವ, ಭ್ರಾತೃತ್ವವನ್ನು ಮೈಗೂಡಿಸಿಕೊಂಡು ಬದುಕಿದ ಹಲವಾರು ವ್ಯಕ್ತಿಗಳ ಚಿತ್ರಣ ಕಾಣುವುದು; ನಿಕೃಷ್ಟಕ್ಕೆ ಒಳಗಾದವರ ಬದುಕಿನ ಗತಿಯನ್ನು ಬದಲಿಸಬೇಕೆನ್ನುವ ಛಲ ಹೊಮ್ಮುವುದು ಈ ಕಾರಣಕ್ಕಾಗಿಯೇ. ಮಂಟೇದರ ಕವನಗಳಲ್ಲಿ ಅನ್ಯಾಯಗಳ ಬಗ್ಗೆ ತಕರಾರನ್ನೇ ತೆಗೆಯದ ಸಮಯ ಸಾಧಕರ ಬಗ್ಗೆ, ಸುಳ್ಳುಗಳನ್ನು ಗಟ್ಟಿ ದನಿಯಲ್ಲಿ ಹೇಳುತ್ತಾ, ಸತ್ಯವನ್ನಾಗಿಸಲು ಯತ್ನಿಸುತ್ತಿರುವ ಮಾಧ್ಯಮಗಳ ಬಗ್ಗೆ ಆಕ್ರೋಶವಿದೆ. ಮನುಷ್ಯ ಸಂಬಂಧಗಳನ್ನು ಸರಕಾಗಿಸಿರುವ ಸ್ಥಿತಿಯ ಬಗ್ಗೆ ಅಸಹನೀಯ ವೇದನೆಯಿದೆ. ಭಾವಕ್ಕೆ ತಕ್ಕಂತೆ ಮಂಟೇದರ ಕಾವ್ಯ ಭಾಷೆಯೂ ಬದಲಾಗುತ್ತದೆ. ಆದರೆ ಮಂಟೇದ ಅವರ ಒಟ್ಟು ಕಾವ್ಯದ ಧೋರಣೆ, ಉದ್ದೇಶ ಮಾತ್ರ ಒಂದೇ. ದ್ವೇಷ ರಹಿತ ವಾತಾವರಣಕ್ಕಾಗಿ ಕವಿಯ ತೀವ್ರವಾದ ಹಂಬಲ, ಕರುಣೆ, ಪ್ರೀತಿ, ಹದವರಿತ ಸಂಬಂಧಗಳಿಗಾಗಿ ತುಡಿತ, ಭೇದ ಭಾವಗಳಿಲ್ಲದ ಸುಂದರ ಸಮಾಜದ ಕನಸು ಎಂದು ಎಂ.ಆರ್. ಕಮಲ ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ. 

About the Author

ಪ್ರಕಾಶ್‌ ಮಂಟೇದ

ಪ್ರಕಾಶ್ ಮಂಟೇದ ಮೂಲತಃ ರಾಮನಗರ ಜಿಲ್ಲೆಯ ಕುಂಭಾಪುರ ಕಾಲೋನಿಯವರು. ಕನ್ನಡದಲ್ಲಿ ಎಂ.ಎ, ಪಿ.ಹೆಚ್‌.ಡಿ  ಪಡೆದಿದ್ದಾರೆ.  ಬೀದಿರಂಗಭೂಮಿ ಹಾಡುಗಾರ, ರಾಮನಗರ ಜನರಂಗ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಬಸುಲಿಂಗಯ್ಯರವರ ಪ್ರಭಾವದಿಂದ ರಂಗಭೂಮಿ ಹಿನ್ನಲೆಗಾಯಕರಾಗಿದ್ದಾರೆ, ಬಂಜಗೆರೆ ಜಯಪ್ರಕಾಶ್ , ಕೆ.ರಾಮಯ್ಯ,  ನಟ್ರಾಜ್ ಹುಳಿಯಾರ್, ಕಿರಂ ಮುಂತಾದ ಸಾಹಿತ್ಯ ಸಾಂಸ್ಕೃತಿಕ ವ್ಯಕ್ತಿತ್ವಗಳ ಪ್ರಭಾವ ಕಾವ್ಯ ಸಾಹಿತ್ಯದ ಗ್ರಹಿಕೆಗಳ ಪ್ರಭಾವ ಪರಿಣಾಮ,  ಕೆ.ವೈ ನಾರಾಯಣಸ್ವಾಮಿ ರವರ ಮಾರ್ಗದರ್ಶನದಲ್ಲಿ ಮಂಟೇಸ್ವಾಮಿ ಕುರಿತ ಅಧ್ಯಯನದ ಮಾರ್ಗದರ್ಶನ ಬಯಲು ಬಳಗದ ಕ್ರಿಯಾಶೀಲನಾದದ್ದು, ಸಂಶೋಧನೆ, ಸಾಹಿತ್ಯ ಮೀಮಾಂಸೆ, ವಿಮರ್ಶೆ ಆಸಕ್ತಿ‌ ಕೇಂದ್ರಗಳು..ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದೊಡ್ಡಬಳ್ಳಾಪುರದಲ್ಲಿ ಸಹ ಪ್ರಾಧ್ಯಾಪಕನಾಗಿ ಕೆಲಸ ನಿರ್ವಹಣೆ ಮಾಡುತಿದ್ದಾರೆ.  ...

READ MORE

Related Books