About the Author

ಡಾ.ಪ್ರೇಮಾ ಅಪಚಂದ ಅವರು ಮೂಲತಃ ಕಲಬುರಗಿಯವರು. ತಂದೆ- ರಾಜೇಂದ್ರಪ್ಪ ಅಪಚಂದ. ತಾಯಿ- ತಿಪ್ಪಮ್ಮಾ ಅಪಚಂದ. ಪ್ರೌಢಶಿಕ್ಷಣವನ್ನು ಕಲಬುರಗಿಯ ಆದರ್ಶನಗರದ ಸರ್ಕಾರಿ ಪ್ರೌಢಶಾಲೆಯಲ್ಲೂ, ಪದವಿಪೂರ್ವ ಶಿಕ್ಷಣವನ್ನು ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲೂ, ಬಿ.ಎ ಪದವಿಯನ್ನು ಸರ್ಕಾರಿ ಪದವಿ ಕಾಲೇಜಿನಲ್ಲೂ ಹಾಗೂ ಕನ್ನಡ ಸ್ನಾತಕೋತ್ತರ ಪದವಿಯನ್ನು ಕಲಬುರಗಿ ವಿಶ್ವವಿದ್ಯಾಲಯದಲ್ಲಿ ಪೂರೈಸಿದರು. ಡಾ. ಪ್ರೇಮಾ ಅವರು ಸಮಾಜದ ಪುರುಷ ಪ್ರಧಾನ ಒಳವಿನ್ಯಾಸಗಳು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿವೆ ಎಂಬ ಅಂಶಗಳನ್ನು ಇಟ್ಟುಕೊಂಡು ಹೈದ್ರಾಬಾದ ಕರ್ನಾಟಕ ಮಹಿಳಾ ಕಾವ್ಯ ವಿಷಯವಾಗಿ ಮಹಾಪ್ರಬಂಧವನ್ನು ಮಂಡಿಸಿ ಕಲಬುರಗಿ ವಿಶ್ವಾವಿದ್ಯಾಲಯದಿಂದ 2011 ರಲ್ಲಿ ಪಿ.ಎಚ್.ಡಿ. ಪದವಿ ಪಡೆದಿದ್ದಾರೆ. ಚಿತ್ತಾಪೂರ ನಾಗಾವಿ ಪದವಿಪೂರ್ವ ಕಾಲೇಜು, ಚಿಟ್ಟಗುಪ್ಪಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಲಬುರಗಿ ರೇಶ್ಮಿ ಶಿಕ್ಷಣ ಸಂಸ್ಥೆಯ ಪದವಿ ಮಹಾವಿದ್ಯಾಲಯ, ಕಲಬುರಗಿ ವಿಶ್ವನಾಥ ರೆಡ್ಡಿ ಮುದ್ನಾಳ ಬಿ.ಬಿ.ಎಂ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಕಲಬುರಗಿ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ, ಬಸವ ಕಲ್ಯಾಣ(ಬೀದರ) ಎಂ.ಎ ಕನ್ನಡ ಮತ್ತು ಶರಣ ಸಾಹಿತ್ಯ ಅಧ್ಯಯನ ಹಾಗೂ ಸಂಶೋಧನಾ ವಿಭಾಗದಲ್ಲಿ, ಶಹಾಪೂರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲೂ, ಕಲಬುರಗಿ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಹಾಲಹಳ್ಳಿ(ಬೀದರ)ದಲ್ಲಿ ಎಂ.ಎ ಕನ್ನಡ ಅಧ್ಯಯನ ಹಾಗೂ ಸಂಶೋಧನಾ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದಾರೆ.  ಪ್ರಸ್ತುತ ಕಲಬುರಗಿಯ ವಿಶ್ವನಾಥ ರೆಡ್ಡಿ ಮುದ್ನಾಳ ಮೆಮೋರಿಯಲ್ ಇನ್ಸ್ ಟಿಟ್ಯೂಟ್ ಆಫ್ ಬಿಸಿನೆಸ್ ಮ್ಯಾನೇಜ್ ಮೆಂಟ್ ಅಂಡ್ ಕಾಮರ್ಸ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದಾರೆ.

ಕೃತಿಗಳು: ಸಮಾನತೆಯೆಡೆಗೆ ಒಂದು ನಡಿಗೆ-ಸ್ತ್ರೀವಾದ ಸಮರ್ಥನೆಗಳ ಲೇಖನಗಳ ಸಂಗ್ರಹ

ಪ್ರೇಮಾ ಅಪಚಂದ

(24 Jul 1981)