About the Author

ದಕ್ಷಿಣ ಕನ್ನಡದ ಶಾಂತಿಗೋಡಿನಲ್ಲಿ 1969ರಲ್ಲಿ ಜನಿಸಿದ ರಾಧೇಶ ತೋಳ್ಪಾಡಿಯವರು ಇಂಗ್ಲಿಷಿನಲ್ಲಿ ಸ್ನಾತಕೋತ್ತರ ಪದವೀಧರರು. ಪ್ರಸ್ತುತ ಬಂಟ್ವಾಳ ತಾಲೂಕಿನ ವಾಮಪದವಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಶ್ರೀಯುತರು ಮಕ್ಕಳಿಗಾಗಿ ಸೊಗಸಾದ ಕವಿತೆಗಳು ಹಾಗೂ ನಾಟಕಗಳನ್ನು ಬರೆದಿದ್ದಾರೆ. 'ಬಿಸಿಲಿನ ದೊರೆಗೆ ನೆರಳಿನ ಮನೆ', 'ಹಲೋ ಹಲೋ ಚಂದಮಾಮ, 'ತುಂಟ ಗಾಳಿ ಕೈಯಲ್' ಮತ್ತು 'ರೈಲು ರೈಲು ಅಲಸಂಡೆ' ಇವರ ಮಕ್ಕಳ ಕವಿತೆಗಳಾದರೆ 'ಲಂಕೆಯ ರಕ್ಕಸ ಪಿಳ್ಳೆಗಳು' ಮಕ್ಕಳ ನಾಟಕ. ಪ್ರಜಾವಾಣಿ ದೀಪಾವಳಿ ವಿಶೇಷಾಂಕವೂ ಸೇರಿದಂತೆ ಹಲವಾರು ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಇವರ ಶಿಶು ಕಾವ್ಯಕ್ಕೆ ಬಹುಮಾನಗಳು ಸಂದಿರುವುದು ಇವರು ಮಕ್ಕಳ ಸಾಹಿತ್ಯದತ್ತ ತೋರುತ್ತಿರುವ ಪ್ರೌಢ ಅಕ್ಕರಾಸ್ಥೆಗೆ ಸಾಕ್ಷಿಯಾಗಿವೆ. ಇವರ 'ಪುಟ್ಟನೂ ಅವನ ಕನಸಿನ ಆಕಾಶಪ್ಪನೂ' ಕವಿತೆಯು ಮಹಾರಾಷ್ಟ್ರದಲ್ಲಿ ಎಂಟನೇ ತರಗತಿಯ ಪಠ್ಯವಾಗಿದೆ. ಡಾ. ನಾ. ಡಿಸೋಜ ಪುಸ್ತಕ ಬಹುಮಾನ ಮತ್ತು ಸಿಸು ಸಂಗಮೇಶ ದತ್ತಿನಿಧಿ ಪ್ರಶಸ್ತಿಗೆ 'ಹಲೋ ಹಲೋ ಚಂದಮಾಮ' ಕೃತಿಯು ಭಾಜನವಾಗಿದೆ.

ರಾಧೇಶ ತೋಳ್ಪಾಡಿ