ಕವಿ ರಾಧೇಶ ತೋಳ್ಪಾಡಿ ಅವರ ಮಕ್ಕಳ ಕವನ ಸಂಕಲನ ಕೃತಿ ʻಹಲೋ ಹಲೋ ಚಂದಮಾಮʼ. ಈ ಪುಸ್ತಕದಲ್ಲಿ ಒಟ್ಟು 32 ಕವಿತೆಗಳು, 10 ಶಿಶು ಪ್ರಾಶುಗಳಿದ್ದು, ಅವುಗಳಲ್ಲಿ ʻರಂಗನತಿಟ್ಟಿನ ಗುಬ್ಬಿ ಮತ್ತು ಆರ್ಕಟಿಕ್ ಟರ್ನ್” ಕವನವು ಪ್ರಜಾವಾಣಿ ಪತ್ರಿಕೆಯ ದೀಪಾವಳಿ ವಿಶೇಷಾಂಕದ ʻಶಿಶು ಕಾವ್ಯ ಸ್ಪರ್ಧೆʼಯಲ್ಲಿ ಪ್ರಥಮ ಬಹುಮಾನ ಪಡೆದಿದೆ. ಪುಸ್ತಕದ ಮುನ್ನುಡಿಯಲ್ಲಿ ವಿಮರ್ಶಕ ಮತ್ತು ಕವಿ ಡಾ. ಚಿಂತಾಮಣಿ ಕೊಡ್ಲೆಕೆರೆ ಅವರು ಹೀಗೆ ಬರೆದಿದ್ದಾರೆ, “ಹೊಸ ಕಾಲದ ಲಯ, ನಿರೀಕ್ಷೆಗಳು ಬೇರೆಯೇ ಇವೆ. ಇಂಗ್ಲಿಷ್, ಹಿಂದಿಯ ಹಾಡುಗಳ ಮೋಡಿಗೆ ನಮ್ಮ ಮಕ್ಕಳು ಒಳಗಾಗುವರಾದರೆ ಕನ್ನಡ ಹಾಡುಗಳು ಅವರನ್ನು ಸೆಳೆಯಬೇಕಲ್ಲವೇ? ಮಕ್ಕಳಿಗೆ ಕವಿತೆ ಓದುತ್ತಿದ್ದಂತೆ ಅದು “ಕಾಣಬೇಕು", "ಕೇಳಬೇಕು", "ಕುಣಿಯ ಬೇಕೆನ್ನಿಸಬೇಕು” -ಅರಿವೇ ಆಗದಂತೆ!” ಅಂಥ ಹಲವು ಮಕ್ಕಳ ಕವನಗಳನ್ನು ಈ ಸಂಕಲನದಲ್ಲಿ ಕೊಟ್ಟಿದ್ದಾರೆ ಕವಿ ರಾಧೇಶ ತೋಳ್ಪಾಡಿ.”
©2023 Book Brahma Private Limited.